ಕಳೆದ 7 ವರ್ಷಗಳಲ್ಲಿ ಭಾರತ ಡಿಜಿಟಲ್ ವಹಿವಾಟಿನಲ್ಲಿ ಹೊಸ ದಿಕ್ಕನ್ನು ಜಗತ್ತಿಗೆ ತೋರಿಸಿದೆ: ಪ್ರಧಾನಿ ಮೋದಿ 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ದೇಶದ ನಾಗರಿಕರನ್ನು ಉದ್ದೇಶಿಸಿ ತಮ್ಮ 77ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ 7 ವರ್ಷ ಪೂರೈಸಿದೆ. 
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ದೇಶದ ನಾಗರಿಕರನ್ನು ಉದ್ದೇಶಿಸಿ ತಮ್ಮ 77ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ 7 ವರ್ಷ ಪೂರೈಸಿದೆ.

ಈ ಏಳು ವರ್ಷಗಳಲ್ಲಿ ಸಂಪೂರ್ಣ ಶಾಂತಿ ಮತ್ತು ಸೌಹಾರ್ದತೆಯಿಂದ ಹಲವು ಹಳೆಯ ಸಂಕಷ್ಟ, ಸವಾಲು-ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈಶಾನ್ಯ ಭಾರತದಿಂದ ಕಾಶ್ಮೀರದವರೆಗೆ ಹೊಸ ಶಾಂತಿ ಮತ್ತು ಬೆಳವಣಿಗೆಯ ಆತ್ಮವಿಶ್ವಾಸ ಮೂಡಿದೆ ಎಂದರು.

ಡಿಜಿಟಲ್ ವಹಿವಾಟುಗಳಲ್ಲಿ ಕಳೆದ 7 ವರ್ಷಗಳಲ್ಲಿ ದೇಶ ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಿದೆ. ಇಂದು ಜಗತ್ತಿನ ಯಾವ ಸ್ಥಳದಲ್ಲಿ ಕುಳಿತುಕೊಂಡು ಬೇಕಾದರೂ ನೀವು ಸುಲಭವಾಗಿ ಡಿಜಿಟಲ್ ಮೂಲಕ ಪಾವತಿ ಮಾಡಬಹುದು. ಈ ಕೊರೋನಾ ಸಮಯದಲ್ಲಂತೂ ಡಿಜಿಟಲ್ ವಹಿವಾಟಿನ ಬಳಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ಗೊತ್ತಾಗಿರಬಹುದು ಎಂದರು.

ಕೊರೋನಾ ಮೊದಲ ಅಲೆ ಬಂದಾಗ ಸಂಪೂರ್ಣ ಧೈರ್ಯದಿಂದ ನಾವು ಅದರ ವಿರುದ್ಧ ಹೋರಾಡಿದ್ದೇವೆ. ಈ ಬಾರಿ ಕೂಡ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ವಿಜಯಿಯಾಗಲಿದೆ ಎಂದರು.ಯಶಸ್ಸು ಇರುವಲ್ಲಿ ಪ್ರಯೋಗಗಳು ಕೂಡ ಇರುತ್ತದೆ. ಯಶಸ್ಸಿಗೆ ಹಲವು ಅಡೆ-ತಡೆಗಳು ಎದುರಾಗಬಹುದು. ಈ ಏಳು ವರ್ಷಗಳಲ್ಲಿ ನಾವೆಲ್ಲರೂ ಒಟ್ಟಾಗಿ ಹಲವು ಸಂಕಷ್ಟ ಸಮಯಗಳನ್ನು ಎದುರಿಸಿದ್ದೇವೆ, ಆದರೆ ಪ್ರತಿ ಬಾರಿ ಕೂಡ ನಾವು ಮತ್ತಷ್ಟು ಗಟ್ಟಿಯಾಗಿ ಗೆದ್ದು ಹೊರಬಂದಿದ್ದೇವೆ.

ಜಲ ಜೀವನ ಮಿಷನ್: ಇತ್ತೀಚೆಗೆ ಕುಟುಂಬವೊಂದು ಫೋಟೋ ಹಂಚಿಕೊಂಡಿತ್ತು. ಜಲಜೀವನ ಮಿಷನ್ ನಡಿ ಟ್ಯಾಪ್ ನ್ನು ಅಳವಡಿಸಿ ನನ್ನ ಗ್ರಾಮದ ಜೀವನಾಡಿ ಎಂದು ಅಡಿಬರಹ ಕೊಟ್ಟಿದ್ದರು, ಆಯುಷ್ಮಾನ್ ಭಾರತ್ ಯೋಜನೆಯಿಂದ ಹೊಸ ನಂಬಿಕೆಯೊಂದು ದೇಶದ ಜನರಲ್ಲಿ ಬಂದಿದೆ, ಅದೆಂದರೆ ಆಸ್ಪತ್ರೆಯಿಂದ ಬಡ ರೋಗಿಯೊಬ್ಬ ಗುಣಮುಖನಾಗಿ ಬಂದರೆ ಹೊಸ ಜೀವನ ಸಿಕ್ಕಿದೆ ಎಂದು ಭಾವಿಸುತ್ತಾರೆ, ದೇಶ ಅವರ ಜೊತೆಗಿದೆ ಎಂದು ಬಡವರು ಭಾವಿಸುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಲ್ಲಿ ವಿದ್ಯುತ್ ಸಂಪರ್ಕ ಹಳ್ಳಿ ಹಳ್ಳಿಗೆ ತಲುಪಿದೆ. ಇಂದು ವಿದ್ಯುತ್ ಬೆಳಕಿನಲ್ಲಿ ಅನೇಕ ಮಕ್ಕಳು ಓದುತ್ತಿದ್ದಾರೆ. ಫ್ಯಾನ್ ಕೆಳಗೆ ಕುಳಿತುಕೊಳ್ಳುತ್ತಾರೆ. ದೇಶದ ವಿರುದ್ಧ ಪಿತೂರಿ ನಡೆಸುವವರ ವಿರುದ್ಧ ಭಾರತ ದಿಟ್ಟವಾಗಿ ಪ್ರತಿಕ್ರಿಯೆ ನೀಡುತ್ತಿದೆ ಎಂದರೆ ನಮ್ಮಲ್ಲಿರುವ ಆತ್ಮವಿಶ್ವಾಸ ಬೆಳೆದಿದೆ ಎಂದಲ್ಲವೇ ಎಂದು ಪ್ರಧಾನಿ ಕೇಳಿದ್ದಾರೆ.

ಇಂದು ಮೇ 30, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷಗಳನ್ನು ಪೂರೈಸಿದೆ. ಇದೇ ಹೊತ್ತಿಗೆ ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ದೇಶ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದೊಂದಿಗೆ ನಡೆದುಕೊಂಡು ಮುಂದೆ ಸಾಗುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com