
ನವದೆಹಲಿ: ಮುಂಗಾರು ನಾಳೆ ದಕ್ಷಿಣ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಮುನ್ಸೂಚನೆ ನೀಡಿದೆ.
ದಕ್ಷಿಣದ ಕೇರಳ ಕರಾವಳಿ ತೀರ ಪ್ರದೇಶದಲ್ಲಿ ನಾಳೆ ಮುಂಗಾರು ಅಪ್ಪಳಿಸಲು ಪರಿಸ್ಥಿತಿ ಅನುಕೂಲಕರವಾಗುವ ಸಾಧ್ಯತೆಯಿದೆ
ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸುಮಾರು ಅರ್ಧದಷ್ಟು ರೈತರು ನೀರಾವರಿಯನ್ನು ಹೊಂದಿಲ್ಲ. ರಾಗಿ, ಅಕ್ಕಿ, ಜೋಳ, ಕಬ್ಬು, ಹತ್ತಿ, ಸೋಯಾಬಿನ್, ಮತ್ತಿತರ
ಬೆಳೆ ಬೆಳೆಗಾಗಿ ಜೂನ್ - ಸೆಪ್ಟೆಂಬರ್ ತಿಂಗಳಲ್ಲಿ ಬೀಳುವ ವಾರ್ಷಿಕ ಮಳೆಯನ್ನೇ ಅವಲಂಬಿಸಿದ್ದಾರೆ.
ಈ ವರ್ಷ ದೇಶದಲ್ಲಿ ಸರಾಸರಿ ಮುಂಗಾರು ಮಳೆ ಆಗುವ ಆಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಕಳೆದ ತಿಂಗಳು ಹೇಳಿತ್ತು.ಇದು ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯ ನಿರೀಕ್ಷೆಯನ್ನು ಹೆಚ್ಚಿಸಿದೆ. ಕೃಷಿ ಕ್ಷೇತ್ರ ದೇಶದ ಆರ್ಥಿಕತೆಯ ಕೇಂದ್ರವಾಗಿದೆ.
Advertisement