ಕೋವಿಡ್ ರೋಗಿಗಳಿಗೆ ಆನಂದಯ್ಯ ಅವರ ಆಯುರ್ವೇದ ಔಷಧ ಬಳಸಲು ಆಂಧ್ರ ಸರ್ಕಾರ ಅನುಮತಿ!

ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಹಳ್ಳಿಯ ಆಯುರ್ವೇದ ಪಂಡಿತ ಬಿ ಆನಂದಯ್ಯ ಅವರಿಂದ ತಯಾರಿಸಲ್ಪಟ್ಟ ಔಷಧದಿಂದ ಕೋವಿಡ್-19 ರೋಗಿಗಳು ಆಶ್ಚರ್ಯಕರ ರೀತಿಯಲ್ಲಿ ಗುಣಮುಖರಾಗುತ್ತಿದ್ದು, ಈ ಸಾಂಪ್ರಾದಾಯಿಕ ಔಷಧವನ್ನು ಸೋಂಕಿತರು ಚಿಕಿತ್ಸೆಯಾಗಿ  ಬಳಸಲು ಆಂಧ್ರ ಪ್ರದೇಶ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಅಮರಾವತಿ: ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಹಳ್ಳಿಯ ಆಯುರ್ವೇದ ಪಂಡಿತ ಬಿ ಆನಂದಯ್ಯ ಅವರಿಂದ ತಯಾರಿಸಲ್ಪಟ್ಟ ಔಷಧದಿಂದ ಕೋವಿಡ್-19 ರೋಗಿಗಳು ಆಶ್ಚರ್ಯಕರ ರೀತಿಯಲ್ಲಿ ಗುಣಮುಖರಾಗುತ್ತಿದ್ದು, ಈ ಸಾಂಪ್ರಾದಾಯಿಕ ಔಷಧವನ್ನು ಸೋಂಕಿತರು ಚಿಕಿತ್ಸೆಯಾಗಿ  ಬಳಸಲು ಆಂಧ್ರ ಪ್ರದೇಶ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿದೆ.

ಆದಾಗ್ಯೂ, ಕೆಲವೇ ನಿಮಿಷಗಳಲ್ಲಿ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲಿದೆ ಎನ್ನಲಾದ ಕಣ್ಣಿಗೆ ಹನಿ ಹಾಕಲು  ಆನಂದಯ್ಯ ಅವರಿಗೆ ಸರ್ಕಾರ ಅನುಮತಿ ನೀಡಿಲ್ಲ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ  ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಉನ್ನತ ಮಟ್ಟದ ಪರಾಮರ್ಶನಾ ಸಭೆಯಲ್ಲಿ ಪಿ, ಎಲ್ ಮತ್ತು ಎಫ್ ಎಂಬ ಹೆಸರಿನ ಮೂರು ಸಾಂಪ್ರಾದಾಯಿಕ  ಔಷಧವನ್ನು ಬಳಸಲು ಅನುಮತಿ ನೀಡಲು ಸರ್ಕಾರ ನಿರ್ಧರಿಸಿತು. ಈ ವಿಚಾರವನ್ನು ಆಂಧ್ರ ಪ್ರದೇಶ ಹೈಕೋರ್ಟ್ ಗೆ ಸರ್ಕಾರ ತಿಳಿಸಿದೆ.

ಔಷಧ ವಿಶಿಷ್ಠವಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಇದನ್ನು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940ರ ಸೆಕ್ಷನ್ 3(ಹೆಚ್) ಅಡಿಯಲ್ಲಿ ಪೆಟೆಂಟ್ ಅಥವಾ ಸ್ವಾಮ್ಯದ ಔಷಧವಾಗಿ ವರ್ಗೀಕರಿಸಬೇಕೆಂದು ಅಂದಾನಯ್ಯ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅನೇಕ ವರ್ಷಗಳಿಂದ ಆಯುರ್ವೇದ ವೈದ್ಯರಾಗಿದ್ದು, ತಮ್ಮ ಔಷಧಕ್ಕೆ ಯಾವುದೇ ಅನುಮತಿ ಬೇಡ, ಈ ಔಷಧವನ್ನು ಮಾರಾಟ ಮಾಡುವ ಉದ್ದೇಶವಿಲ್ಲ, ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲು ಅವಕಾಶ ನೀಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಆಯುರ್ವೇದ ವಿಜ್ಞಾನಗಳ ಸಂಶೋಧನೆಗಾಗಿ ಕೇಂದ್ರಿಯ ಸಮಿತಿ ನೀಡಿದ ವರದಿ ಆಧಾರದ ಮೇಲೆ ಕೃಷ್ಣಪಟ್ಟಣಂ ಔಷಧಿ ಎಂದೇ ಜನಪ್ರಿಯವಾಗಿರುವ ಔಷಧವನ್ನು ಕೊರೋನಾ ರೋಗಿಗಳು ಬಳಸಲು ಅನುಮತಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಆಯುರ್ವೇದ ವಿಜ್ಞಾನಗಳ ಸಂಶೋಧನೆಗಾಗಿ ಕೇಂದ್ರಿಯ ಸಮಿತಿ ನೀಡಿದ ವರದಿಯಲ್ಲಿ ಕೃಷ್ಣಪಟ್ಟಣಂ ಔಷಧದಿಂದ ಕೋವಿಡ್-19 ಗುಣಮುಖವಾದ ಬಗ್ಗೆ ಯಾವುದೇ ಪುರಾವೆಗಳಿಲ್ಲ, ಆದಾಗ್ಯೂ, ವೈದ್ಯರು ನೀಡಿದ ಔಷಧಗಳೊಂದಿಗೆ ಕೃಷ್ಣಪಟ್ಟಣಂ ಔಷಧ ಬಳಸಬಹುದು, ಇದು ಅವರ ವೈಯಕ್ತಿಕ ಆಯ್ಕೆ ಎಂದು ಸರ್ಕಾರ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com