ಆನ್​ಲೈನ್​ ಗೇಮ್​​ನಲ್ಲಿ 10 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ: ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ

ಆನ್​ಲೈನ್ ಗೇಮ್ ನಲ್ಲಿ 10 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿಯೊಬ್ಬ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್​ಗ್ರಾಹ್​ನಲ್ಲಿ ನಡೆದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ರಾಜ್​ಗ್ರಾಹ್​​: ಆನ್​ಲೈನ್ ಗೇಮ್ ನಲ್ಲಿ 10 ಲಕ್ಷ ರೂಪಾಯಿ ಕಳೆದುಕೊಂಡ ವ್ಯಕ್ತಿಯೊಬ್ಬ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್​ಗ್ರಾಹ್​ನಲ್ಲಿ ನಡೆದಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಭಾನುವಾರ ತಡರಾತ್ರಿ ಪಡೋನಿಯಾ ಗ್ರಾಮದ ರೈಲ್ವೆ ಹಳಿಯ ಮೇಲೆ ವಿನೋದ್ ಡಾಂಗಿ(30) ಎಂದು ಗುರುತಿಸಲಾದ ವ್ಯಕ್ತಿಯ ಶವ ಪತ್ತೆಯಾಗಿದೆ. ಆತ ಬಿಯೋರಾ ನಿವಾಸಿಯಾಗಿದ್ದು, ಬಿಯೋರಾ-ಭೋಪಾಲ್ ರಸ್ತೆಯ ಸರ್ಪಂಚ್ ಢಾಬಾ ಬಳಿ ಶಾಪಿಂಗ್ ಕಾಂಪ್ಲೆಕ್ಸ್ ಹೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಡಾಂಗಿಗೆ 'ತೀನ್ ಪಟ್ಟಿ' ಎಂಬ ಆನ್​ಲೈನ್​ ಗೇಮ್​ನ ಚಟ ಬಹಳ ಇತ್ತು ಎಂದು ಶಾಪಿಂಗ್ ಕಾಂಪ್ಲೆಕ್ಸ್ ನ ಅಂಗಡಿಕಾರರು ಪೊಲೀಸರಿಗೆ ತಿಳಿಸಿದ್ದಾರೆ. ಆತ ತನ್ನ ಮೊಬೈಲ್ ಫೋನ್ ನಲ್ಲಿ ಯಾವಾಗಲೂ ಗೇಮ್​ ಆಡುತ್ತಿದ್ದ, ಅಲ್ಲದೇ ನಗದು ಬಹುಮಾನವನ್ನು ಗೆಲ್ಲಲು ಬೆಟ್ಟಿಂಗ್ ಕಟ್ಟುತ್ತಿದ್ದನು ಎಂದು ಅಂಗಡಿಯ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ.

ಅಂಗಡಿಯಲ್ಲಿ ಕುಳಿತು ಹಗಲು ರಾತ್ರಿ ಆಟ
ಮೃತ ಯುವಕ ವಿನೋದ್ ಕಳೆದ ಮೂರು ತಿಂಗಳಿಂದ ತೀನ್ ಪಟ್ಟಿ ಆಟ ಆಡುತ್ತಿದ್ದ ಎಂದು ಆತನ ಸ್ನೇಹಿತರು ಹೇಳುತ್ತಾರೆ. ಈ ಆಟವನ್ನು ತುಂಬಾ ಆಡುತ್ತಿದ್ದ ಅವರು ಈ ಆಟಕ್ಕೆ ಅಡಿಕ್ಟ್ ಆಗಿದ್ದರು. ತೀನ್ ಪಟ್ಟಿ ಆಟ ಆಡಲು ತನ್ನ ಕಾಂಪ್ಲೆಕ್ಸ್‌ನ ಅಂಗಡಿಯವರಿಂದ ಸಾಲವನ್ನೂ ಪಡೆದಿದ್ದ. ಇದರಲ್ಲಿ 10 ಲಕ್ಷ ರೂಪಾಯಿಯನ್ನೂ ಕಳೆದುಕೊಂಡಿದ್ದರು. ಅಂಗಡಿಯಲ್ಲಿ ಕೂತು ದಿನವಿಡೀ ಈ ಆಟವನ್ನು ಆಡುತ್ತಿದ್ದ ಈ ಆಟದ ಹುಚ್ಚು ಹಿಡಿದಿತ್ತು.

ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನ
ಮೂವರು ಸಹೋದರಿಯರಲ್ಲಿ ವಿನೋದ್ ಒಬ್ಬನೇ ಸಹೋದರ. ವಿನೋದ್‌ಗೆ ವಿವಾಹವಾಗಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕೆಲ ದಿನಗಳ ಹಿಂದೆ ಮನೆಯಲ್ಲಿ ನೇಣು ಬಿಗಿದುಕೊಳ್ಳಲು ಯತ್ನಿಸಿದ್ದು, ಕುಟುಂಬಸ್ಥರು ಕಣ್ಣಿಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದನು.

ವಿನೋದ್ ಸಿರಿವಂತ ಮನೆಯವನು
ವಿನೋದ್ ಸಿನಿವಂತ ಮನೆಯವರು. ವಿನೋದ್ ಅವರ ತಂದೆ ಹೇಮರಾಜ್ ಡಂಗಿ ದೊಡ್ಡ ಕೃಷಿಕರಾಗಿದ್ದು, ಬಿಯೋರಾದ ಭೋಪಾಲ್ ರಸ್ತೆಯಲ್ಲಿರುವ ಸರಪಂಚ ಧಾಬಾ ಬಳಿ ದೊಡ್ಡ ಸಂಕೀರ್ಣವನ್ನು ಹೊಂದಿದ್ದಾರೆ. ಇದು 7 ರಿಂದ 8 ಅಂಗಡಿಗಳನ್ನು ಹೊಂದಿದೆ. ಎಲ್ಲವನ್ನೂ ಬಾಡಿಗೆಗೆ ಬಿಟ್ಟಿದ್ದಾರೆ. ವಿನೋದ್ ಈ ಸಂಕೀರ್ಣವನ್ನು ನೋಡಿಕೊಳ್ಳುತ್ತಿದ್ದರು. ದಿನವಿಡೀ ಹೀಗೆಯೇ ಕೂರುತ್ತಿದ್ದ. ಮೂರು ತಿಂಗಳ ಹಿಂದೆಯೇ ತೀನ್ ಪತ್ತಿ ಆಟ ಆರಂಭಿಸಿದ್ದರು. ಈ ಮೂರು ತಿಂಗಳಲ್ಲಿ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಸಾಲವಾಗಿತ್ತು. ಈ ಬಗ್ಗೆ ಇನ್ನೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಬಯೋರಾ ಡೆಹ್ತಾ ಪೊಲೀಸ್ ಠಾಣೆಯ ಉಸ್ತುವಾರಿ ಆದಿತ್ಯ ಸೋನಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com