ಗಂಗಾ ನದಿ ಸ್ವಚ್ಛಗೊಳಿಸುವುದು ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರ ಜವಾಬ್ದಾರಿ ಸಹ: ಜಲಶಕ್ತಿ ಸಚಿವ

ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು ಕೇವಲ ಸರ್ಕಾರದ ಕೆಲಸ ಎಂದು ಭಾವಿಸದೇ ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದು ಪರಿಗಣಿಸಬೇಕಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು...
ಗಂಗಾನದಿ
ಗಂಗಾನದಿ

ನವದೆಹಲಿ: ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು ಕೇವಲ ಸರ್ಕಾರದ ಕೆಲಸ ಎಂದು ಭಾವಿಸದೇ ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ ಎಂದು ಪರಿಗಣಿಸಬೇಕಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಬುಧವಾರ ಹೇಳಿದ್ದಾರೆ.

ಗಂಗಾ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ತಾವು ಪರಿಸರದ ಪಾಲಕರು ಎಂದು ಭಾವಿಸಬೇಕು ಎಂದರು.

ಈ ಪರಿಸರದ ಪಾಲಕನ ಪಾತ್ರ ನಮ್ಮದು, ಅದನ್ನು ಉತ್ತಮಪಡಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕೇ ವಿನಃ ಮತ್ತಷ್ಟು ಹಾಳು ಮಾಡಬಾರದು. ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು ಕೇವಲ ಸರ್ಕಾರದ ಕೆಲಸವಲ್ಲದೆ ತನ್ನ ಜವಾಬ್ದಾರಿ ಇದೆ ಎಂದು ಸಮಾಜ ಯೋಚಿಸಬೇಕಿದೆ ಎಂದು ಜಲಶಕ್ತಿ ಸಚಿವರು ಹೇಳಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಮಾತನಾಡಿ, ಗಂಗಾ ನದಿಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಬೇಕಿದೆ. "ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ, ಸ್ವಚ್ಛ ಗಂಗಾ ಮಿಷನ್ ಯಶಸ್ವಿಯಾಗಲಿದೆ ಎಂದು ನನಗೆ ವಿಶ್ವಾಸವಿದೆ. ಒಬ್ಬ ಭಾರತೀಯನಾಗಿ, ಗಂಗಾ ನದಿಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಸ್ವಚ್ಛಗೊಳಿಸುವುದು ದೇಶದ ಅತ್ಯಂತ ನಿರ್ಣಾಯಕ ಕಾರ್ಯಕ್ರಮ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com