ವಿಂಗ್ ಕಮಾಂಡರ್‌ ಅಭಿನಂದನ್ ವರ್ಧಮಾನ್ ಗೆ "ಗ್ರೂಪ್ ಕ್ಯಾಪ್ಟನ್" ಶ್ರೇಣಿಗೆ ಬಡ್ತಿ

ಪಾಕಿಸ್ತಾನದ ಪಾಲಿಗೆ ನಡುಕ ಹುಟ್ಟಿಸಿದ್ದ ಅಭಿನಂದನ್ ವರ್ಧಮಾನ್ ಗೆ ಸೇನೆ ದೀಪಾವಳಿ ಗಿಫ್ಟ್ ಕೊಟ್ಟಿದೆ. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಅವರಿಗೆ "ಗ್ರೂಪ್ ಕ್ಯಾಪ್ಟನ್" ಶ್ರೇಣಿಗೆ ಬಡ್ತಿ ನೀಡಲಾಗಿದೆ.
ಅಭಿನಂದನ್ ವರ್ಧಮಾನ್
ಅಭಿನಂದನ್ ವರ್ಧಮಾನ್

ನವದೆಹಲಿ: ಪಾಕಿಸ್ತಾನದ ಪಾಲಿಗೆ ನಡುಕ ಹುಟ್ಟಿಸಿದ್ದ ಅಭಿನಂದನ್ ವರ್ಧಮಾನ್ ಗೆ ಸೇನೆ ದೀಪಾವಳಿ ಗಿಫ್ಟ್ ಕೊಟ್ಟಿದೆ. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಅವರಿಗೆ "ಗ್ರೂಪ್ ಕ್ಯಾಪ್ಟನ್" ಶ್ರೇಣಿಗೆ ಬಡ್ತಿ ನೀಡಲಾಗಿದೆ. ಭಾರತೀಯ ಸೇನೆಯಲ್ಲಿ "ಗ್ರೂಪ್ ಕ್ಯಾಪ್ಟನ್" ಅನ್ನೋದು "ಕರ್ನಲ್" ಹುದ್ದೆಗೆ ಸಮವಾಗಿರುತ್ತದೆ.

ಫೆಬ್ರವರಿ 2019ರಲ್ಲಿ ನಡೆದ ಪಾಕಿಸ್ತಾನದೊಂದಿಗಿನ ವೈಮಾನಿಕ ಚಕಮಕಿಯಲ್ಲಿ ಅಭಿನಂದನ್, ಶತ್ರು ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು.  ಭಾರತದ ಪಾಲಿನ ಹೀರೋ ಆಗಿರುವ ಅಭಿನಂದನ್, ಶತ್ರು ರಾಷ್ಟ್ರದ ಗಡಿಯೊಳಗೆ ಸಿಲುಕಿ ಹಾಕಿಕೊಂಡಿದ್ದರು. 

ಈ ಸಂದರ್ಭದಲ್ಲಿ ವೀರ ಯೋಧನಾಗಿರುವ ಅಭಿನಂದನ್ ಅವರನ್ನು, ಪಾಕಿಸ್ತಾನಿ ಪಡೆಗಳು ಒತ್ತೆಯಾಳಾಗಿ ಇಟ್ಟುಕೊಂಡಿದ್ದವು. ನಂತರ ಭಾರತದ ಒತ್ತಡ ಹಾಗೂ ಭವಿಷ್ಯತ್ತಿನಲ್ಲಿ ಆಗಬಹುದಾದ ಆಪತ್ತುಗಳನ್ನು ಮನಗಂಡು ಪಾಕಿಸ್ತಾನದ ಸರ್ಕಾರ, ಯೋಧ ಅಭಿನಂದನ್‍ನ್ನು ರಿಲೀಸ್ ಮಾಡಲು ಒಪ್ಪಿಗೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com