ಪುದುಚೆರಿ: ಪಟಾಕಿ ಸ್ಫೋಟಗೊಂಡು ತಂದೆ-ಮಗ ಸಾವು!

ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿ ಸ್ಫೋಟಗೊಂಡ ಪರಿಣಾಮ 7 ವರ್ಷದ ಬಾಲಕ ಹಾಗೂ ಆತನ ತಂದೆ ಮೃತಪಟ್ಟಿರುವ ಘಟನೆ ಪುದುಚೆರಿಯಲ್ಲಿ ವರದಿಯಾಗಿದೆ.
ಪಟಾಕಿ (ಸಂಗ್ರಹ ಚಿತ್ರ)
ಪಟಾಕಿ (ಸಂಗ್ರಹ ಚಿತ್ರ)
Updated on

ಪುದುಚೆರಿ: ದ್ವಿಚಕ್ರ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಪಟಾಕಿ ಸ್ಫೋಟಗೊಂಡ ಪರಿಣಾಮ 7 ವರ್ಷದ ಬಾಲಕ ಹಾಗೂ ಆತನ ತಂದೆ ಮೃತಪಟ್ಟಿರುವ ಘಟನೆ ಪುದುಚೆರಿಯಲ್ಲಿ ವರದಿಯಾಗಿದೆ.

ಅರಿಯನ್ ಕುಪ್ಪಂ ಟೌನ್ ನ ನಿವಾಸಿ ಕಲೈನೇಸನ್ (32) ತನ್ನ 7 ವರ್ಷದ ಪುತ್ರನೊಂದಿಗೆ ಎರಡು ಚೀಲದಲ್ಲಿ ಪಟಾಕಿ ಹೊತ್ತು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೊಟ್ಟಕುಪ್ಪಮ್ ಬಳಿ ಬಂದಾಗ ಪಟಾಕಿ ಸ್ಫೋಟಗೊಂಡು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಇನ್ನೂ ಇಬ್ಬರಿಗೆ ಗಾಯಗಳಾಗಿದ್ದು, ಜೆಐಪಿಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಸ್ಥಳದಲ್ಲಿ ವಾಹನ ಸಂಚಾರ 2 ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು. ಪ್ರಕರಣ ದಾಖಲಿಸಿಕೊಂಡಿರಿವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com