2070ರ ವೇಳೆಗೆ ಜೀರೊ ಕಾರ್ಬನ್ ಎಮಿಷನ್: ಭಾರತದ ಘೋಷಣೆಯನ್ನು ಸ್ವಾಗತಿಸಿದ ಐಎಂಎಫ್

ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳುವ ಕ್ರಮಗಳು ಜಾಗತಿಕ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಐಎಂಎಫ್ ಅಧಿಕಾರಿ ಗೆರ್ರಿ ರೈಸ್ ಅಭಿಪ್ರಾಯಪಟ್ಟಿದ್ದಾರೆ. 
ನರೇಂದ್ರ ಮೋದಿ
ನರೇಂದ್ರ ಮೋದಿ

ವಾಷಿಂಗ್ಟನ್: COP26 ಶೃಂಗಸಭೆಯಲ್ಲಿ ಮಾಲಿನ್ಯ ತಗ್ಗಿಸಲು ಭಾರತ ಮಾಡಿದ್ದ ಘೋಷಣೆಯನ್ನು ಅಂತರಾಷ್ಟ್ರೀಯ ನಿಧಿ (ಐಎಂಎಫ್) ಸ್ವಾಗತಿಸಿದೆ. ಪುನರ್ಬಳಕೆ ಇಂಧನ ಉಪಯೋಗ ಮತ್ತು ಕಾರ್ಬನ್ ಹೊರಸೂಸುವಿಕೆ ಪ್ರಮಾಣವನ್ನು 2070ರ ವೇಳೆಗೆ ಸಂಪೂರ್ಣವಾಗಿ ತಗ್ಗಿಸುವುದಾಗಿ ನರೇಂದ್ರ ಮೋದಿ ಘೋಷಿಸಿದ್ದರು.

ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳುವ ಕ್ರಮಗಳು ಜಾಗತಿಕ ಮಟ್ಟದಲ್ಲಿ ಮಾಲಿನ್ಯ ನಿಯಂತ್ರಣ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಐಎಂಎಫ್ ಅಧಿಕಾರಿ ಗೆರ್ರಿ ರೈಸ್ ಅಭಿಪ್ರಾಯಪಟ್ಟಿದ್ದಾರೆ. 

ಈಗಾಗಲೇ ಜಾಗತಿಕ ಹವಾಮಾನ ಬದಲಾವನೆ ವಿಷಯವಾಗಿ ಜಗತ್ತಿನ ಹಲವು ರಾಷ್ಟ್ರಗಳು ಕಳವಳ ವ್ಯಕ್ತ ಪಡಿಸಿವೆ. ಮಾಲಿನ್ಯ ನಿಯಂತ್ರಣ ಸಾಧ್ಯವಾಗದೇ ಹೋದಲ್ಲಿ ದೇಶಗಳು ಹವಾಮಾನ ವೈಪರೀತ್ಯದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಿ ಬರುವುದು. ಆ ನಿಟ್ಟಿನಲ್ಲಿ ಜಾಗತಿಕ ತಾಪಮಾನದಲ್ಲಿ ೨ ಡಿಗ್ರಿ ತಗ್ಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಭೆಗಳು ನಡೆದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com