ಛತ್ ಪೂಜೆ: ವಿಷಕಾರಿ ನೊರೆಯ ಮಧ್ಯೆ ಯಮುನಾದಲ್ಲಿ ಸ್ನಾನ ಮಾಡಿದ ಭಕ್ತರ ವಿಡಿಯೋ; ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಿಡಿ

ಛತ್ ಪೂಜೆಯ ಮೊದಲ ದಿನವಾದ ಸೋಮವಾರ ಹಲವಾರು ಭಕ್ತರು ವಿಷಕಾರಿ ನೊರೆಯಿಂದ ಆವೃತವಾಗಿರುವ ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಕಂಡುಬಂತು.
ಛತ್ ಪೂಜೆ
ಛತ್ ಪೂಜೆ
Updated on

ನವದೆಹಲಿ: ಛತ್ ಪೂಜೆಯ ಮೊದಲ ದಿನವಾದ ಸೋಮವಾರ ಹಲವಾರು ಭಕ್ತರು ವಿಷಕಾರಿ ನೊರೆಯಿಂದ ಆವೃತವಾಗಿರುವ ದೆಹಲಿಯ ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಕಂಡುಬಂತು.

ಕಾಳಿಂದಿ ಕುಂಜ್ ಬಳಿ ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆ ತೇಲುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ. ಛತ್ ಪೂಜೆ ಇಂದಿನಿಂದ ಉತ್ತರ ಭಾರತದಲ್ಲಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನದಿಗಳಲ್ಲಿ ಪುಣ್ಯಸ್ನಾನ ಮಾಡಿ ಸೂರ್ಯದೇವನಿಗೆ ವಿಶೇಷ ಪೂಜೆ ಸಲ್ಲಿಸುವುದು ಪದ್ಧತಿಯಾಗಿದೆ.

ಯಮುನಾದಲ್ಲಿ ಅಮೋನಿಯ ಮಟ್ಟವು  ಏರಿಕೆಯಾಗಿದ್ದು, ಇದು ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ನೀರಿನ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.

ಛತ್ ಪೂಜೆಯ ಸಂಭ್ರಮ
ಛಠ್ ಪೂಜೆಯ ಸಂಭ್ರಮ ಶುರುವಾಗಿದೆ. ದೀಪಾವಳಿಯ ನಂತರ ಬರುವ ಈ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಬಿಹಾರ, ಜಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶದ ಜನರು ಈ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ದೇಶದ ಇತರ ಭಾಗಗಳಲ್ಲಿಯೂ ಛಾತ್ ಆಚರಿಸಲಾಗುತ್ತಿದೆ. ಇಂದು, 'ನಹಯ್-ಖಯ್' ನಿಂದಲೇ ಘಾಟ್‌ಗಳಲ್ಲಿ ಭಕ್ತರ ದಂಡು ಹರಿದು ಬರಲಾರಂಭಿಸಿದೆ.

ನಹಯ್-ಖಯ್ ದಿನದಂದು, ಕುಂಬಳಕಾಯಿ ಮತ್ತು ಅಕ್ಕಿಯ ನೈವೇದ್ಯವನ್ನು ಮಾಡಲಾಗುತ್ತದೆ ಮತ್ತು ಭಕ್ತರು ಅದನ್ನು ತೆಗೆದುಕೊಳ್ಳುತ್ತಾರೆ. ಸ್ನಾನದ ದಿನದಿಂದ ಮನೆಯಲ್ಲಿ ಸಾತ್ವಿಕ ಆಹಾರ ತಯಾರಿಸಿ ಶುಚಿತ್ವದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಈ ಉಪವಾಸದ ಸಮಯದಲ್ಲಿ, ಆಹಾರದಲ್ಲಿ ಈರುಳ್ಳಿ-ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಸ್ನಾನದ ನಂತರವೇ ಆಹಾರವನ್ನು ತಯಾರಿಸಲಾಗುತ್ತದೆ. ಛತ್‌ನಲ್ಲಿ, ಮಹಿಳೆಯರು ಉಪವಾಸ ಮಾಡುತ್ತಾರೆ ಮತ್ತು ಮೊಣಕಾಲು ಆಳದ ನೀರಿನಲ್ಲಿ ನಿಂತು ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುತ್ತಾರೆ.

'ಯಮುನಾ ದಡದಲ್ಲಿ ಛತ್ ಆಚರಿಸಲು ನಿಷೇಧ ಹೇರಲು ಇದೇ ಕಾರಣವೇ?'
ದೀಪಾವಳಿ ಸಂದರ್ಭದಲ್ಲಿ ನೆರೆಯ ರಾಜ್ಯಗಳಲ್ಲಿ ಹುಲ್ಲು ಸುಡುವುದು ಮತ್ತು ಪಟಾಕಿಗಳಿಂದ ದೆಹಲಿಯ ಗಾಳಿಯು ವಿಷಕಾರಿಯಾಗಿದೆ. ಯಮುನಾ ನದಿಯಲ್ಲಿ ಅಮೋನಿಯಾ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇಲ್ಲಿ ನೊರೆಯಾಗಿ ಮಾರ್ಪಟ್ಟಿದೆ. ಉಪವಾಸ ನಿರತರು ನೊರೆ ಸ್ನಾನ ಮಾಡುತ್ತಿರುವ ಚಿತ್ರಗಳು ತೆರೆಗೆ ಬಂದಿದ್ದು, ಬಳಿಕ ರಾಜಕೀಯ ಬಿಸಿ ಏರಿದೆ. ಸಂಸದ ಮನೋಜ್ ತಿವಾರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿದ್ದಾರೆ. ಯಮುನಾ ದಡದಲ್ಲಿ ಛಠ್ ಪೂಜೆಯನ್ನು ಆಚರಿಸಲು ನಿಷೇಧ ಹೇರಿರುವುದಕ್ಕೆ ಇದೇ ಕಾರಣವೇ ಎಂದು ಅವರು ಕೇಳಿದರು.

ಛತ್ ಪೂಜಾ ಕಾರ್ಯಕ್ರಮ
8 ನವೆಂಬರ್ 2021: ಸೋಮವಾರ - (ನಹಯ್-ಖಯ್)
9 ನವೆಂಬರ್ 2021: ಮಂಗಳವಾರ - (ಖರ್ನಾ)
10 ನವೆಂಬರ್ 2021: ಬುಧವಾರ - (ಅಸ್ತಮಿಸುವ ಸೂರ್ಯನಿಗೆ ಅರ್ಘ್ಯ)
11 ನವೆಂಬರ್ 2021: ಗುರುವಾರ - (ಉದಯಿಸುವ ಸೂರ್ಯನಿಗೆ ಅರ್ಘ್ಯ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com