ಜಮ್ಮು-ಕಾಶ್ಮೀರ: ಕುಲ್ಗಾಮ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಕಮಾಂಡರ್ ಸೇರಿ ಐವರು ಉಗ್ರರು ಹತ

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಉನ್ನತ ಕಮಾಂಡರ್ ಸೇರಿದಂತೆ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಜಮ್ಮು ಕಾಶ್ಮೀರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ಉನ್ನತ ಕಮಾಂಡರ್ ಸೇರಿದಂತೆ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಕುಲ್ಗಾಮ್‌ನ ಪಂಬೆ ಮತ್ತು ಗೋಪಾಲ್‌ಪೋರಾ ಗ್ರಾಮಗಳಲ್ಲಿ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ಐವರು ಶಂಕಿತ ಭಯೋತ್ಪಾದಕರನ್ನು ಬುಧವಾರ ಹತ್ಯೆಗೈದಿದ್ದವು.

ಪಾಂಬೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬ್‌ನ ಜಿಲ್ಲಾ ಕಮಾಂಡರ್ ಶಾಕಿರ್ ನಜೀರ್ ಸೇರಿದಂತೆ ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಶಾಕಿರ್‌ನ ಹತ್ಯೆಯು ಭದ್ರತಾ ಪಡೆಗಳಿಗೆ "ದೊಡ್ಡ ಯಶಸ್ಸು" ಎಂದು ಪೊಲೀಸರು ಹೇಳಿದ್ದಾರೆ.

"2018 ರಿಂದ ಸಕ್ರಿಯವಾಗಿದ್ದ ಉನ್ನತ ಭಯೋತ್ಪಾದಕ ಮತ್ತು ಎಚ್‌ಎಂನ ಜಿಲ್ಲಾ ಕಮಾಂಡರ್ ಶಾಕಿರ್ ನಜರ್ ಇನ್ನಿಬ್ಬರು ಭಯೋತ್ಪಾದಕರೊಂದಿಗೆ ಹತರಾಗಿದ್ದಾರೆ. ಇದು ದೊಡ್ಡ ಯಶಸ್ಸು" ಎಂದು ಐಜಿಪಿ ಕಾಶ್ಮೀರವನ್ನು ಉಲ್ಲೇಖಿಸಿ ಪೊಲೀಸರು ಅಧಿಕೃತ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಂಬೆಯಲ್ಲಿ ಹತರಾದ ಇತರ ಇಬ್ಬರು ಭಯೋತ್ಪಾದಕರನ್ನು ಅಸ್ಲಂ ದಾರ್ ಮತ್ತು ಸುಮೈರ್ ನಜರ್ ಎಂದು ಪೊಲೀಸರು ಗುರುತಿಸಿದ್ದಾರೆ.

ಗೋಪಾಲ್ಪೋರಾ ಕುಲ್ಗಾಮ್ ನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟ ಇಬ್ಬರು ಭಯೋತ್ಪಾದಕರಲ್ಲಿ "ದಿ ರೆಸಿಸ್ಟೆನ್ಸ್ ಫ್ರಂಟ್" ನ ಉನ್ನತ ಕಮಾಂಡರ್ ಆಫಕ್ ಸಿಕಂದರ್ ಸೇರಿದ್ದಾರೆ. ಸಿಕಂದರ್ ಟಿಆರ್‌ಎಫ್‌ನ ಜಿಲ್ಲಾ ಕಮಾಂಡರ್ ಆಗಿದ್ದು, ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಸರಣಿ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com