ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ: 5 ನೇ ಬಾರಿಗೆ ಇಂದೋರ್ ಗೆ ಅಗ್ರಸ್ಥಾನ, ಮೈಸೂರು-17, 89 ನೇ ಸ್ಥಾನದಲ್ಲಿ ಬೆಂಗಳೂರು

ಕೇಂದ್ರ ಸರ್ಕಾರ ನ.20 ರಂದು 2021 ನೇ ಸಾಲಿನ ಸ್ವಚ್ಛ ನಗರಗಳ ಪ್ರಶಸ್ತಿ ಘೋಷಣೆ ಮಾಡಿದ್ದು , ಸತತ 5 ನೇ ಬಾರಿಗೆ ಅಗ್ರಸ್ಥಾನದಲ್ಲಿ ಇಂದೋರ್ ನಗರ ಸ್ಥಾನ ಗಿಟ್ಟಿಸಿದೆ. 
ಸ್ವಚ್ಛ ಸರ್ವೇಕ್ಷಣ್ (ಸಾಂಕೇತಿಕ ಚಿತ್ರ)
ಸ್ವಚ್ಛ ಸರ್ವೇಕ್ಷಣ್ (ಸಾಂಕೇತಿಕ ಚಿತ್ರ)

ನವದೆಹಲಿ: ಕೇಂದ್ರ ಸರ್ಕಾರ ನ.20 ರಂದು 2021 ನೇ ಸಾಲಿನ ಸ್ವಚ್ಛ ನಗರಗಳ ಪ್ರಶಸ್ತಿ ಘೋಷಣೆ ಮಾಡಿದ್ದು , ಸತತ 5 ನೇ ಬಾರಿಗೆ ಅಗ್ರಸ್ಥಾನದಲ್ಲಿ ಇಂದೋರ್ ನಗರ ಸ್ಥಾನ ಗಿಟ್ಟಿಸಿದೆ. 

2 ಮತ್ತು 3 ನೇ ಸ್ಥಾನದಲ್ಲಿನ ಪ್ರಶಸ್ತಿಗಳನ್ನು ಸೂರತ್ ಹಾಗೂ ವಿಜಯವಾಡ ನಗರಗಳು ಅನುಕ್ರಮವಾಗಿ ಪಡೆದಿವೆ. ಈ ಹಿಂದೆ ಹಲವು ಬಾರಿ ಮೊದಲ ಸ್ಥಾನ ಗಳಿಸಿದ್ದ ಮೈಸೂರು ಈಗ 17 ನೇ ಸ್ಥಾನಕ್ಕೆ ಕುಸಿದಿದ್ದು, ಹುಬ್ಬಳ್ಳಿ-ಧಾರವಾಡ 57 ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ನಗರ 89 ರಲ್ಲಿದೆ. 

ಇನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಯನ್ನು ಶುದ್ಧ ಗಂಗೆ ಇರುವ ನಗರವೆಂದು ಘೋಷಿಸಲಾಗಿದ್ದರೆ, ಬಿಹಾರದ ಮುಂಗೇರ್ ಮತ್ತು ಪಾಟ್ನಾ ಅನುಕ್ರಮವಾಗಿ 2 ಹಾಗೂ ಮೂರನೇ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.

2021 ನೇ ಸಾಲಿನಲ್ಲಿ ಇಂದೋರ್ ಮತ್ತು ಸೂರತ್ ನಗರಗಳು ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, ನವಿ ಮುಂಬೈ ಸ್ಥಾನವನ್ನು, ಕಳೆದ ಬಾರಿ 4 ನೇ ಸ್ಥಾನದಲ್ಲಿದ್ದ ವಿಜಯವಾಡ ಈ ಬಾರಿ ಪಡೆದುಕೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ನೀಡಿದ್ದಾರೆ. 

28 ದಿನಗಳ ಕಾಲ 4,320 ನಗರಗಳಲ್ಲಿ ನಡೆದ ಸ್ವಚ್ಛ ಸಮೀಕ್ಷೆ ಹಾಗೂ 4.2 ಕೋಟಿ ಮಂದಿಯ ಪ್ರತಿಕ್ರಿಯೆಯ ಆಧಾರದಲ್ಲಿ ಈ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com