ಪೋರ್ಟ್ ಬ್ಲೇರ್ ನಿಂದ ಬೆಂಗಳೂರಿಗೆ: ವಿಮಾನದ ಕಾಕ್ ಪಿಟ್ ನಲ್ಲಿ ಸಮವಸ್ತ್ರ ಧರಿಸಿ ಕುಳಿತಿದ್ದವರು ಸಂಸದ ರಾಜೀವ್ ಪ್ರತಾಪ್ ರೂಡಿ!

ವಾಣಿಜ್ಯ ಪೈಲಟ್ ಪರವಾನಗಿ ಹೊಂದಿರುವ ಮಾಜಿ ವಿಮಾನಯಾನ ಸಚಿವರೂ ಆಗಿರುವ ಸಂಸದ ರಾಜೀವ್ ಪ್ರತಾಪ್ ರೂಡಿ, ಪೋರ್ಟ್ ಬ್ಲೇರ್‌ನಿಂದ ಬೆಂಗಳೂರಿಗೆ (6E 6596) ಹಾಗೆಯೇ ಬೆಂಗಳೂರಿನಿಂದ ಪಾಟ್ನಾಕ್ಕೆ (6E 485) ಕಾಕ್‌ಪಿಟ್‌ನಲ್ಲಿ ಪೈಲಟ್ ಪಕ್ಕ ಸಹ ಪೈಲಟ್ ಆಗಿ ಕುಳಿತು ಪ್ರಯಾಣಿಸಿದ್ದರು.
ರಾಜ್ಯಸಭಾ ಸದಸ್ಯ ಸಂಭಾಜಿ ಚತ್ರಪತಿ ಜೊತೆ ಸಂಸದ ಮಾಜಿ ಸಚಿವ ರಾಜೀವ್ ಪ್ರತಾಪ್ ರೂಡಿ
ರಾಜ್ಯಸಭಾ ಸದಸ್ಯ ಸಂಭಾಜಿ ಚತ್ರಪತಿ ಜೊತೆ ಸಂಸದ ಮಾಜಿ ಸಚಿವ ರಾಜೀವ್ ಪ್ರತಾಪ್ ರೂಡಿ
Updated on

ಬೆಂಗಳೂರು: ಎರಡು ಇಂಡಿಗೋ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ನಿನ್ನೆಯ ಪ್ರಯಾಣ ನೆನಪಿನಲ್ಲಿಡುವ ಪ್ರವಾಸವಾಗಿತ್ತು. ವಾಣಿಜ್ಯ ಪೈಲಟ್ ಪರವಾನಗಿ ಹೊಂದಿರುವ ಮಾಜಿ ವಿಮಾನಯಾನ ಸಚಿವರೂ ಆಗಿರುವ ಸಂಸದ ರಾಜೀವ್ ಪ್ರತಾಪ್ ರೂಡಿ, ಪೋರ್ಟ್ ಬ್ಲೇರ್‌ನಿಂದ ಬೆಂಗಳೂರಿಗೆ (6E 6596) ಹಾಗೆಯೇ ಬೆಂಗಳೂರಿನಿಂದ ಪಾಟ್ನಾಕ್ಕೆ (6E 485) ಕಾಕ್‌ಪಿಟ್‌ನಲ್ಲಿ ಪೈಲಟ್ ಪಕ್ಕ ಸಹ ಪೈಲಟ್ ಆಗಿ ಕುಳಿತು ಪ್ರಯಾಣಿಸಿದ್ದರು. ಎರಡೂ ವಿಮಾನಗಳಲ್ಲಿ 180ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.

ಬಿಹಾರದ ಸರನ್ ಕ್ಷೇತ್ರದ ಸಂಸದರಾಗಿರುವ ರಾಜೀವ್ ಪ್ರತಾಪ್ ರೂಡಿ, ಜನವರಿ 2013 ರಿಂದ ಇಂಡಿಗೋ ಗೌರವಾನ್ವಿತ ಸಹ-ಪೈಲಟ್ ಆಗಿದ್ದಾರೆ. ವಿಮಾನಗಳನ್ನು ಓಡಿಸುವ ವಿಶ್ವದ ಏಕೈಕ ಸಂಸದರಾಗಿದ್ದಾರೆ. ಹಿಂದೆ ರಾಜೀವ್ ಗಾಂಧಿ ಅವರು ವಾಣಿಜ್ಯ ಪೈಲಟ್ ಪರವಾನಗಿಯನ್ನು ಹೊಂದಿದ್ದ ಏಕೈಕ ಪ್ರಧಾನಿಯಾಗಿದ್ದರು.

ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ 32 ಸದಸ್ಯರ ಸಂಸದೀಯ ಸಮಿತಿಯ ಭಾಗವಾಗಿರುವ ಸಂಸದ ರೂಡಿ ಅವರು ಭಾನುವಾರ ಪೋರ್ಟ್ ಬ್ಲೇರ್ ಬಳಿಯ ಹ್ಯಾವ್ಲಾಕ್ ದ್ವೀಪಗಳಲ್ಲಿ ಸಭೆಯ ನಂತರ ವಿಮಾನದಲ್ಲಿ ಪ್ರಯಾಣಿಸಿದರು. ಪಾಟ್ನಾದಲ್ಲಿ ತನ್ನ ಸಹ ಪೈಲಟ್ ಆಗಿ ಸಮವಸ್ತ್ರ ಧರಿಸಿದ ನಂತರ ದೂರವಾಣಿ ಮೂಲಕ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ಪ್ರತಾಪ್ ರೂಡಿ, ವಿಮಾನದಲ್ಲಿ ಪೈಲಟ್ ಆಗಿ ಪ್ರಯಾಣವನ್ನು ನಾನು ಸದ್ದಿಲ್ಲದೆ ಮಾಡುತ್ತಿರುತ್ತೇನೆ.  ಇಷ್ಟು ಸಮಯ ಹೊರಗಡೆ ಪ್ರಪಂಚಕ್ಕೆ ಇದು ಗೊತ್ತಿರಲಿಲ್ಲ. ವಿಮಾನದಲ್ಲಿರುವಾಗ ಪ್ರಯಾಣಿಕರು ಸೆಲ್ಫಿ ತೆಗೆದು ಅದನ್ನು ಬಹಿರಂಗಮಾಡಿದ್ದರಿಂದ ಈಗ ಜನರಿಗೆ ಗೊತ್ತಾಗುತ್ತಿದೆ. ರಾಜ್ಯಸಭಾ ಸದಸ್ಯ ಸಂಭಾಜಿ ಛತ್ರಪತಿ ಅವರು ತಮ್ಮ ಪೈಲಟ್ ಸಮವಸ್ತ್ರದಲ್ಲಿರುವ ರೂಡಿಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ರಫೆಲ್, ಇತರ ಯುದ್ಧ ವಿಮಾನಗಳಲ್ಲಿ ಕೂಡ ಹಾರಾಟ ನಡೆಸಿದ್ದ ರೂಡಿ: ಪೈಲಟ್ ಕರ್ತವ್ಯದಲ್ಲಿರುವ ವಿಶ್ವದ ಏಕೈಕ ಸಂಸದ ನಾನು.  ರಫೇಲ್ ಯುದ್ಧವಿಮಾನ ಭಾರತ ವಾಯುಪಡೆಗೆ ಸೇರ್ಪಡೆಯಾಗುವ ಮುನ್ನವೇ ಹಾರಾಟ ನಡೆಸಿದ್ದೆ.  ಬೆಂಗಳೂರಿನಲ್ಲಿ ಏರ್ ಶೋಗಳಲ್ಲಿ ನಿಯಮಿತವಾಗಿ ಯುದ್ಧ ವಿಮಾನಗಳನ್ನು ಹಾರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ವಿಮಾನ ಹಾರಾಟದಲ್ಲಿ ಕೂಡ ಆಸಕ್ತಿ ಉಳಿಸಿಕೊಂಡಿದ್ದೇನೆ. ರಾಜಕೀಯ ಕರ್ತವ್ಯಗಳಿಂದ ನಿವೃತ್ತನಾದರೂ ಕೂಡ ಇದರ ಆಸಕ್ತಿ ಬಿಡುವುದಿಲ್ಲ ಎನ್ನುತ್ತಾರೆ.

ನಾಗರಿಕ ವಿಮಾನಯಾನ ಸಚಿವಾಲಯದ ನಿಯಮಗಳ ಅಡಿಯಲ್ಲಿ ಪೈಲಟ್ ಪರವಾನಗಿಯನ್ನು ಉಳಿಸಿಕೊಳ್ಳಲು ಕೆಲವು ಗಂಟೆಗಳ ಕಾಲ ಆಕಾಶದಲ್ಲಿ ಹಾರಾಟ ನಡೆಸುವುದು ಕಡ್ಡಾಯವಾಗಿದೆ ಎನ್ನುತ್ತಾರೆ ರೂಡಿ. ಎರಡು ಗಂಟೆಯ ವಿಮಾನದಲ್ಲಿ ಪ್ರಯಾಣಿಕರಾಗಿರುವುದು ಬೇಸರ ತರುತ್ತದೆ. ಆಗ ನಾನು ಕಾಕ್ ಪಿಟ್ ನಲ್ಲಿ ಕೂರಲು ಇಷ್ಟಪಡುತ್ತೇನೆ ಎನ್ನುತ್ತಾರೆ.


"ಇಂದು ಬೆಳಿಗ್ಗೆ ನಾನು ನನ್ನ ಕ್ಷೇತ್ರದಿಂದ 4 ಸಾವಿರ ಕಿಮೀ ದೂರದಲ್ಲಿರುವ ಪೋರ್ಟ್ ಬ್ಲೇರ್‌ನಲ್ಲಿದ್ದೆ, ಸಭೆಯಲ್ಲಿ ಭಾಗವಹಿಸಿ ಬೆಂಗಳೂರಿಗೆ ವಿಮಾನದಲ್ಲಿ ಬಂದೆ. ಕಾರಿನಲ್ಲಿ ನನ್ನ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ ಎಂದು ವಿವರ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com