ಕೋವಿಡ್-19 ಲಸಿಕೆ ಖರೀದಿಸಲು ಭಾರತಕ್ಕೆ 1.5 ಬಿಲಿಯನ್ ಡಾಲರ್ ADB ಸಾಲ!

ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ ಲಸಿಕೆಗಳನ್ನು ಖರೀದಿಸುವುದಕ್ಕಾಗಿ 1.5 ಬಿಲಿಯನ್ (11,185 ಕೋಟಿ) ರೂಪಾಯಿಗಳ ಸಾಲವನ್ನು ಅನುಮೋದಿಸಿದೆ. 
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ನವದೆಹಲಿ: ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ ಲಸಿಕೆಗಳನ್ನು ಖರೀದಿಸುವುದಕ್ಕಾಗಿ 1.5 ಬಿಲಿಯನ್ (11,185 ಕೋಟಿ) ರೂಪಾಯಿಗಳ ಸಾಲವನ್ನು ಅನುಮೋದಿಸಿದೆ. 

ಈ ಸಂಬಂಧ ಎಡಿಬಿ ಪ್ರಕಟಣೆ ಮಾಡಿದ್ದು, ಇದೇ ಯೋಜನೆಗಾಗಿ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಎಐಐಬಿ) ಹೆಚ್ಚುವರಿ 500 ಮಿಲಿಯನ್ ಡಾಲರ್ ನೀಡುವ ನಿರೀಕ್ಷೆ ಇದೆ ಎಂದು ಎಡಿಬಿ ಹೇಳಿದೆ. ಬೀಜಿಂಗ್ ಮೂಲದ ಎಐಐಬಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದ್ದು ಏಷ್ಯಾವನ್ನು ಅಭಿವೃದ್ಧಿಪಡಿಸುವ ಬ್ಯಾಂಕ್ ಆಗಿದೆ. 

ಎಡಿಬಿಯಿಂದ ಪಡೆಯಲಾಗಿರುವ ಆರ್ಥಿಕ ನೆರವಿನಿಂದ 66.7 ಕೋಟಿ ಕೋವಿಡ್-19 ಲಸಿಕೆ ಡೋಸ್ ಗಳನ್ನು ಖರೀದಿಸಬಹುದಾಗಿದ್ದು 31.7 ಕೋಟಿ ಮಂದಿಗೆ ನೀಡಬಹುದಾಗಿದೆ.
 
18 ವರ್ಷಗಳ ಮೇಲ್ಪಟ್ಟ 94.47 ಕೋಟಿ ಮಂದಿಗೆ ಪೂರ್ಣಪ್ರಮಾಣದಲ್ಲಿ ಲಸಿಕೆ ನೀಡುವ ಭಾರತದ ರಾಷ್ಟ್ರೀಯ ನಿಯೋಜನೆ ಮತ್ತು ವ್ಯಾಕ್ಸಿನೇಷನ್ ಯೋಜನೆಗೆ ಎಡಿಬಿ ಆರ್ಥಿಕ ನೆರವು ಬೆಂಬಲವಾಗಿದೆ. ಎಡಿಬಿಯಿಂದ 4 ಮಿಲಿಯನ್ (ಅಂದಾಜು 30 ಕೋಟಿ ರೂಪಾಯಿ)  ತಾಂತ್ರಿಕ ನೆರವು ಯೋಜನೆ ದೇಶದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಎಡಿಬಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com