ಚೆನ್ನೈ: ಸ್ಥಳೀಯ ಚುನಾವಣೆಗಳು ಹತ್ತಿರದಲ್ಲಿರುವಾಗಲೇ ತಮಿಳು ನಾಯಕ ನಟ ವಿಜಯ್ ಅಭಿಮಾನಿಗಳು ಫಲಕಗಳನ್ನು ಹಿಡಿದು ಮತದಾರರ ಹಕ್ಕುಗಳ ಕುರಿತಾದ ಜಾಗೃತಿ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ.
ರಾಜಕೀಯದಲ್ಲಿ ತಮ್ಮ ಅದೃಷ್ಟಪರೀಕ್ಷೆ ನಡೆಸಲು ವಿಜಯ್ ಆಸಕ್ತಿ ಹೊಂದಿದ್ದು ಅದಕ್ಕೆ ಪೂರ್ವಭಾವಿ ತಯಾರಿಯಲ್ಲಿ ತೊಡಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವಿಜಯ್ ಅಭಿಮಾನಿಗಳು ಮುಖ್ಯವಾಗಿ ಯುವಪೀಳಿಗೆಯನ್ನು ಕೇಂದ್ರೀಕರಿಸಿ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಭಿತ್ತಿ ಪೋಸ್ಟರ್ ಗಳು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ವಿಜಯ್ ಅಭಿಮಾನಿಗಳು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ.
Advertisement