12 ಸಂಸದರ ಅಮಾನತು: ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದೆ ಪ್ರಿಯಾಂಕಾ ಚತುರ್ವೇದಿ

ಕಳೆದ ಮುಂಗಾರು ಅಧಿವೇಶನದಲ್ಲಿ ಅನುಚಿತ, ಅಶಿಸ್ತಿನ ವರ್ತನೆ ತೋರಿದ 12 ಪ್ರತಿಪಕ್ಷದ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಭಾಗಗಳಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಇದಾದ ಕೆಲವು ಗಂಟೆಗಳ ನಂತರ, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮೇಲ್ಮನೆಯಲ್ಲಿ ತೆಗೆದುಕೊಂಡ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಿಯಾಂಕಾ ಚತುರ್ವೇದಿ
ಪ್ರಿಯಾಂಕಾ ಚತುರ್ವೇದಿ
Updated on

ನವದೆಹಲಿ: ಕಳೆದ ಮುಂಗಾರು ಅಧಿವೇಶನದಲ್ಲಿ ಅನುಚಿತ, ಅಶಿಸ್ತಿನ ವರ್ತನೆ ತೋರಿದ 12 ಪ್ರತಿಪಕ್ಷದ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಭಾಗಗಳಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಇದಾದ ಕೆಲವು ಗಂಟೆಗಳ ನಂತರ, ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮೇಲ್ಮನೆಯಲ್ಲಿ ತೆಗೆದುಕೊಂಡ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನು "ಅತ್ಯಂತ ಪ್ರಜಾಪ್ರಭುತ್ವ ವಿರೋಧಿ" ಎಂದು ಕರೆದ ಚತುರ್ವೇದಿ, ನಿರ್ಧಾರದ ಬಗ್ಗೆ ನನಗೆ ತಿಳಿಸಲಾಗಿಲ್ಲ ಮತ್ತು ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಇದಲ್ಲದೆ, ತಮ್ಮ ಅಮಾನತಿನ ವಿರುದ್ಧ ರಾಜ್ಯಸಭಾ ಅಧ್ಯಕ್ಷರೊಂದಿಗೆ ಮಾತನಾಡುವುದಾಗಿ ಅವರು ಹೇಳಿದರು. ಇಂತಹ ಘಟನೆಯು "ಸಂಸದೀಯ ಪ್ರಜಾಪ್ರಭುತ್ವದಲ್ಲಿ ಕೇಳರಿಯದ ಘಟನೆ" ಎಂದು ಅವರು ಹೇಳಿದ್ದಾರೆ.

ಅವರು ಯಾವ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ? ನಮಗೆ ನಿಯಮಗಳ ಬಗ್ಗೆ ತಿಳಿದಿಲ್ಲವೇ? ಎಂದು ಅವರು ಕೋಪದಿಂದ ಹೇಳಿದರು.

ಅಧಿಕೃತ ಸೂಚನೆಯ ಪ್ರಕಾರ, 12 ವಿರೋಧ ಪಕ್ಷದ ಶಾಸಕರನ್ನು ಅನುಚಿತ, ಅಶಿಸ್ತಿನ ವರ್ತನೆ, ಸದನದ ವ್ಯವಹಾರಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ. ರಾಜ್ಯಸಭೆಯ 254 ನೇ ಅಧಿವೇಶನದ ಕೊನೆಯ ದಿನ ಅಂದರೆ ಆಗಸ್ಟ್ 11 ರಂದು ಭದ್ರತಾ ಸಿಬ್ಬಂದಿ ಈ ನೋಟಿಸ್ ಓದುತ್ತಾರೆ.

ಅಮಾನತುಗೊಂಡ ಸಂಸದರ ಪಟ್ಟಿ:
1. ಎಳಮರಮ್ ಕರೀಂ (ಸಿಪಿಎಂ)
2. ಫುಲೋ ದೇವಿ ನೇತಮ್ (ಐಎನ್​ಸಿ)
3. ಛಾಯಾ ವರ್ಮಾ (ಐಎನ್​ಸಿ)
4. ರಿಪುನ್ ಬೋರಾ (ಐಎನ್​ಸಿ)
5. ಬಿನೋಯ್ ವಿಶ್ವಂ (ಸಿಪಿಐ)
6. ರಾಜಮಣಿ ಪಟೇಲ್ (ಐಎನ್​ಸಿ)
7. ಡೋಲಾ ಸೇನ್ (ಟಿಎಂಸಿ)
8. ಶಾಂತಾ ಛೆಟ್ರಿ (ಟಿಎಂಸಿ)
9. ಸೈಯದ್ ನಾಸಿರ್ ಹುಸೇನ್ (ಐಎನ್​ಸಿ)
10. ಪ್ರಿಯಾಂಕಾ ಚತುರ್ವೇದಿ (ಶಿವಸೇನೆ)
11. ಅನಿಲ್ ದೇಸಾಯಿ (ಶಿವಸೇನೆ)
12. ಅಖಿಲೇಶ್ ಪ್ರಸಾದ್ ಸಿಂಗ್ (ಐಎನ್​ಸಿ)

ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದಸ್ಯರ ಅಮಾನತು ಘೋಷಿಸಿ ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com