ತವಾಂಗ್ ನಲ್ಲಿ ಚೀನಾ-ಭಾರತ ಸೇನಾ ಪಡೆಗಳ ನಡುವೆ ಘರ್ಷಣೆ
ಅರುಣಾಚಲ ಪ್ರದೇಶ: ಲಡಾಖ್ ಘರ್ಷಣೆಯ ನಂತರ ಅರುಣಾಚಲ ಪ್ರದೇಶದಲ್ಲಿ ಚೀನಾ ಕ್ಯಾತೆ ತೆಗೆದಿದ್ದು, ಈ ಭಾಗದ ತವಾಂಗ್ ನ ಯಾಂಗ್ಸೆಯಲ್ಲಿ ಭಾರತ-ಚೀನಾ ಸೇನಾಪಡೆಗಳ ನಡುವೆ ಘರ್ಷಣೆ ಉಂಟಾಗಿದ್ದು ಈಗ ಬಹಿರಂಗಗೊಂಡಿದೆ.
ಸ್ಥಳೀಯ ಕಮಾಂಡರ್ ಗಳ ನಡುವಿನ ಮಾತುಕತೆ ವೇಳೆ ಈ ಸಂಘರ್ಷದ ಪರಿಸ್ಥಿತಿ ತಿಳಿಯಾಗಿದ್ದು ಬಗೆಹರಿದಿದೆ ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಮಂದಿ ಅ.08 ರಂದು ಮಾಹಿತಿ ನೀಡಿದ್ದಾರೆ.
ಚೀನಾದ ಪಿಎಲ್ಎ ಸಿಬ್ಬಂದಿಗಳು ಭಾರತೀಯ ಪ್ರಾಂತ್ಯವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದಾಗ ಭಾರತೀಯ ಸೇನಾ ಸಿಬ್ಬಂದಿಗಳು ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಾಗ ಈ ಸಂಘರ್ಷ ಉಂಟಾಗಿದೆ.
ಈಶಾನ್ಯ ಲಡಾಖ್ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸೇನಾ ಸಭೆ ನಡೆದ ಬಳಿಕ ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆ ಬಗೆಗಿನ ಮಾಹಿತಿ ಬಹಿರಂಗಗೊಂಡಿದೆ.
ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆ ವಿಷಯವಾಗಿ ಇನ್ನು 3-4 ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಚರ್ಚೆ ನಡೆಸಲಾಗುತ್ತದೆ.
ಉಭಯ ಸೇನೆಗಳು ಲೈನ್ ಆಫ್ ಪರ್ಸೆಪ್ಷನ್ ವರೆಗೂ ಗಸ್ತು ಚಟುವಟಿಕೆಗಳನ್ನು ಹೊಂದಿರುತ್ತವೆ. ಮುಖಾಮುಖಿಯಾದಾಗ ಸ್ಥಾಪಿತ ಶಿಷ್ಟಾಚಾರಗಳ ಪ್ರಕಾರವೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ