ಡ್ರಗ್ ಕೇಸು: ಎನ್ ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡ ವ್ಯಕ್ತಿ ಪತ್ತೆಗೆ ಲುಕ್ ಔಟ್ ನೊಟೀಸ್ ಹೊರಡಿಸಿದ ಪುಣೆ ಪೊಲೀಸರು!

ಕಳೆದ ಅಕ್ಟೋಬರ್ 2ರಂದು ತಡರಾತ್ರ ಮುಂಬೈಯಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ನಂತರ ಆತನ ಜೊತೆಗೆ ಎನ್ ಸಿಬಿ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡು ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಸಿಟಿ ಪೊಲೀಸರು ಕಿರಣ್ ಗೋಸವಿ ವಿರುದ್ಧ ಲ
ಎನ್ ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಜೊತೆ ಕಿರಣ್ ಗೋಸಾವಿ
ಎನ್ ಸಿಬಿ ಕಚೇರಿಯಲ್ಲಿ ಆರ್ಯನ್ ಖಾನ್ ಜೊತೆ ಕಿರಣ್ ಗೋಸಾವಿ

ನವದೆಹಲಿ: ಕಳೆದ ಅಕ್ಟೋಬರ್ 2ರಂದು ತಡರಾತ್ರ ಮುಂಬೈಯಲ್ಲಿ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ ನಂತರ ಆತನ ಜೊತೆಗೆ ಎನ್ ಸಿಬಿ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡು ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಸಿಟಿ ಪೊಲೀಸರು ಕಿರಣ್ ಗೋಸವಿ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಿದ್ದಾರೆ.

ಆರ್ಯನ್ ಖಾನ್ ಜೊತೆ ಎನ್ ಸಿಬಿ ಕಚೇರಿಯಲ್ಲಿ ಸೆಲ್ಫಿ ತೆಗೆದುಕೊಂಡ ವ್ಯಕ್ತಿ ಕಿರಣ್ ಗೋಸವಿ ಆಗಿದ್ದು, ಆತನ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಲಾಗಿದ್ದು ದೇಶ ಬಿಟ್ಟು ಹೋಗದಂತೆ ನಿರ್ಬಂಧ ಹೇರಲಾಗಿದೆ ಎಂದು ಪುಣೆ ನಗರ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತ ತಿಳಿಸಿದ್ದಾರೆ. 2018ರಲ್ಲಿ ದಾಖಲಿಸಿಕೊಂಡ ಕೇಸಿಗೆ ಸಂಬಂಧಪಟ್ಟಂತೆ ಗೋಸವಿ ಪೊಲೀಸರಿಗೆ ಬೇಕಾಗಿದ್ದವನಾಗಿದ್ದೇನೆ, ಆ ಪ್ರಕರಣದಲ್ಲಿ ಕೋರ್ಟ್ ಗೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಕ್ಟೋಬರ್ 2ರಂದು ಮುಂಬೈ ತೀರದಲ್ಲಿ ಕ್ರೂಸ್ ಹಡಗಿನ ಮೇಲೆ ನಡೆದ ಎನ್ ಸಿಬಿ ದಾಳಿಯ ಸಾಕ್ಷಿದಾರ ಗೋಸವಿ ಆಗಿದ್ದು, ಆರ್ಯನ್ ಖಾನ್ ಬಂಧನ ನಂತರ ಆತ ಎನ್ ಸಿಬಿ ಕಚೇರಿಯಲ್ಲಿ ಏಕೆ ಇದ್ದ ಎಂದು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಎನ್ ಸಿಪಿ ನಾಯಕ ನವಾಬ್ ಮಲಿಕ್ ಪ್ರಶ್ನಿಸಿದ್ದರು.

ಈ ಮಧ್ಯೆ ಈಗಾಗಲೇ ಸ್ಪಷ್ಟನೆ ನೀಡಿರುವ ಎನ್ ಸಿಬಿ, ಗೋಸವಿ ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ ಮತ್ತು ಅಧಿಕಾರಿಯೂ ಅಲ್ಲ ಎಂದು ಹೇಳಿದೆ. 

2018ರ ಮೇ 19ರಂದು ಮಲೇಷಿಯಾದಲ್ಲಿ ವ್ಯಕ್ತಿಯೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಎಸಗಿದ ಆರೋಪದ ಮೇಲೆ ಗೋಸವಿ ವಿರುದ್ಧ ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಗೋಸವಿ ನಂತರ ವ್ಯಕ್ತಿಗೆ ಹಣವನ್ನು ಹಿಂತಿರುಗಿಸಿಯೂ ಇಲ್ಲ ಜೊತೆಗೆ ಉದ್ಯೋಗವನ್ನೂ ಕೊಡಿಸಿರಲಿಲ್ಲ ಎಂದು ವ್ಯಕ್ತಿ ವಂಚನೆ ಕೇಸು ದಾಖಲಿಸಿದ್ದರು. ಗೋಸವಿ ವಿರುದ್ಧ ಸೆಕ್ಷನ್ 419, 420ರ ಅಡಿಯಲ್ಲಿ ಕೇಸು ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com