ಶೋಪಿಯಾನ್: ಉತ್ತರ ಪ್ರದೇಶದ ಸಹರನ್ಪುರ್ ನಿಂದ ಕಾಶ್ಮೀರಕ್ಕೆ ವಲಸೆ ಬಂದಿದ್ದ ಬಡಗಿಯ ಹತ್ಯೆ ಮಾಡಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಅ.20 ರಂದು ನಡೆದ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿವೆ.
ಶೋಪಿಯಾನ್ ನಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಘಟನೆಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಕಾಶ್ಮೀರ ಝೋನ್ ನ ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಓರ್ವ ಅಲ್ಟ್ರಾ ಉಗ್ರನನ್ನು ಆದಿಲ್ ವನಿ ಎಂದು ಗುರುತಿಸಲಾಗಿದ್ದು ಈತ ಕಳೆದ ಶನಿವಾರ ನಡೆದ ಬಡಗಿಯ ಹತ್ಯೆಗೆ ಕಾರಣನಾಗಿದ್ದ ಎಂದು ಹೇಳಿದ್ದಾರೆ.
ಎನ್ ಕೌಂಟರ್ ಬಗ್ಗೆ ವಿವರಣೆ ನೀಡಿರುವ ಸೇನಾ ಅಧಿಕಾರಿಗಳು, ಎನ್ ಕೌಂಟರ್ ಹಿನ್ನೆಲೆಯಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಡ್ರಗಡ್ ಹಾಗೂ ಶೋಪಿಯಾನ್ ಜಿಲ್ಲೆಗಳಲ್ಲಿ ಸೇನಾಧಿಕಾರಿಗಳು ಪ್ರಾರಂಭಿಸಿದ್ದು, ಇನ್ನೂ ಉಗ್ರರು ಇರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಶೋಧಕಾರ್ಯಾಚರಣೆಯ ವೇಳೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಎನ್ ಕೌಂಟರ್ ನಡೆಸಬೇಕಾಯಿತು ಎಂದು ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ ಎಫ್) ನ ಇಬ್ಬರು ಅಲ್ಟ್ರಾಗಳು, ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿದ್ದರೆ, ಮೂವರು ಭದ್ರತಾ ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement