ಕ್ಷೇತ್ರದಲ್ಲಿ ನೀವು ಮಾಡಿದ ಕೆಲಸವೇನು? ಎಂದು ಕೇಳಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಶಾಸಕ, ವಿಡಿಯೋ ವೈರಲ್

ಸರ್, ನೀವು ಕ್ಷೇತ್ರದಲ್ಲಿ ಇಲ್ಲಿಯವರೆಗೆ ಏನೇನು ಕೆಲಸ ಮಾಡಿದ್ದೀರಿ? ಎಂದು ಯುವಕನೋರ್ವ ಪಂಜಾಬ್​ನ ಕಾಂಗ್ರೆಸ್​ ಶಾಸಕ ಜೋಗಿಂದರ್​ ಪಾಲ್​​ ಅವರಿಗೆ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಾಸಕರು ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಯುವಕನನ್ನು ಥಳಿಸುತ್ತಿರುವ ದೃಶ್ಯ
ಯುವಕನನ್ನು ಥಳಿಸುತ್ತಿರುವ ದೃಶ್ಯ

ಚಂಡೀಗಢ: ಸರ್, ನೀವು ಕ್ಷೇತ್ರದಲ್ಲಿ ಇಲ್ಲಿಯವರೆಗೆ ಏನೇನು ಕೆಲಸ ಮಾಡಿದ್ದೀರಿ? ಎಂದು ಯುವಕನೋರ್ವ ಪಂಜಾಬ್​ನ ಕಾಂಗ್ರೆಸ್​ ಶಾಸಕ ಜೋಗಿಂದರ್​ ಪಾಲ್​​ ಅವರಿಗೆ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಶಾಸಕರು ಆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಠಾಣ್ ಕೋಟ್ ಜಿಲ್ಲೆಯ ಭೋವಾದಲ್ಲಿನ ಡೇರೆಯೊಳಗೆ ಪಾಲ್ ಅವರು ಬಿಳಿ ಕುರ್ತಾದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಜನರ ಮಧ್ಯೆ ಇದ್ದ ಕಂದು ಬಣ್ಣದ ಶರ್ಟ್ ಧರಿಸಿದ್ದ ಯುವಕನೊಬ್ಬ ಸರ್​ ನೀವು ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದೀರಾ ಎಂದು ಕೇಳಿದ್ದಾನೆ. ಪಾಲ್​​ ಮೊದಲಿಗೆ ಅವನ ಮಾತನ್ನು ಕಡೆಗಣಿಸಿದ್ದಾರೆ. ಆದರೆ ಯುವಕ ಮತ್ತೆ ಅದೆ ಪ್ರಶ್ನೆಯನ್ನು ಕೇಳಿದಾಗ ಆಕ್ರೋಶಗೊಂಡ ಶಾಸಕ ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ಆತನ ಪಕ್ಕದಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತನ ಕೈ ಹಿಡಿದು ಆತನನ್ನು ಸದ್ದಿಲ್ಲದೆ ಕರೆದೊಯ್ಯಲು ಪ್ರಯತ್ನಿಸಿದರು. ಯುವಕನ ಹೆಸರು ಹರ್ಷ ಕುಮಾರ್ ಎಂದು ತಿಳಿದುಬಂದಿದೆ. ಶಾಸಕನ ಬೆಂಬಲಿಗರು ಹಾಗೂ ಕೆಲ ಪೊಲೀಸರು ಯುವಕನನ್ನು ಥಳಿಸಿದ್ದಾರೆ. ಆಗಲೂ ಕೂಡ ಯುವಕ ನೀನು ನಿಜವಾಗಿಯೂ ಏನು ಮಾಡಿರುವೆ ಎಂದು ಮತ್ತೆ ಮತ್ತೆ ಪ್ರಶ್ನಿಸಿದ್ದಾನೆ.

ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಿಸಿದ ವ್ಯಕ್ತಿಯೋರ್ವನ ಮೇಲೆ ಕಾಂಗ್ರೆಸ್ ಶಾಸ ಹಲ್ಲೆ ಮಾಡಿದ್ದಾರೆ. ಜೋಗಿಂದರ್ ಪಾಲ್ ಅವರು ಯುವಕನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಗೃಹ ಸಚಿವ ಸುಖ್ಜಿಂದರ್ ಸಿಂಗ್ ರಂಧಾವಾ, ಜೋಗಿಂದರ್ ಪಾಲ್ ಸಾರ್ವಜನಿಕವಾಗಿ ಇಂತಹ ವರ್ತನೆ ತೋರಿರುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೇ ವ್ಯಕ್ತಿಯ ಮೇಲೆ ಪೊಲೀಸ್ ಸಿಬ್ಬಂದಿ ಕೂಡ ಹಲ್ಲೆ ಮಾಡಿದ್ದು, ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com