ಇಂದು ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಭಾಷಣ: ಎಲ್ಲರ ಚಿತ್ರ ಮೋದಿ ಭಾಷಣದತ್ತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಬಂದು ಲಾಕ್ ಡೌನ್ ಹೇರಿಕೆಯಾದ ನಂತರ ಪ್ರಧಾನ ಮಂತ್ರಿಗಳು ಹಲವು ಬಾರಿ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗ ಬಂದು ಲಾಕ್ ಡೌನ್ ಹೇರಿಕೆಯಾದ ನಂತರ ಪ್ರಧಾನ ಮಂತ್ರಿಗಳು ಹಲವು ಬಾರಿ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ್ದರು.

ಕೋವಿಡ್-19 ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿ ಈಗ ಪರಿಸ್ಥಿತಿ ಸಹಜತೆಗೆ ಬರುತ್ತಿದೆ. ಜನಜೀವನ, ವ್ಯಾಪಾರ-ವಹಿವಾಟುಗಳು ನಿಧಾನವಾಗಿ ಹಿಂದಿನ ಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಯಾವ ವಿಷಯವನ್ನಿಟ್ಟುಕೊಂಡು ಇಂದು ಮಾತನಾಡಲಿದ್ದಾರೆ ಎಂದು ಕುತೂಹಲ ಕೆರಳಿದೆ. 

ಚೀನಾದ ನಂತರ 100 ಕೋಟಿ ಕೋವಿಡ್ -19 ಲಸಿಕೆ ಮೈಲಿಗಲ್ಲನ್ನು ತಲುಪಿದ ಎರಡನೇ ರಾಷ್ಟ್ರವಾಗಿ ಭಾರತ ಇತಿಹಾಸ ಬರೆದ ಒಂದು ದಿನ ನಂತರ ಪ್ರಧಾನಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. 

ಭಾರತದ ಕೋವಿಡ್-19 ಲಸಿಕೆ ಅಭಿಯಾನವು "ಆತಂಕದಿಂದ ಆಶ್ವಾಸನೆಯತ್ತ" ಪಯಣವನ್ನು ತೋರಿಸಿದೆ, ದೇಶವನ್ನು ಈ ಅಭಿಯಾನ ಮತ್ತಷ್ಟು ಸದೃಢಗೊಳಿಸಿದೆ. ಜನರಿಗೆ ಲಸಿಕೆ ಮೇಲೆ ನಂಬಿಕೆ ಹೆಚ್ಚಾಗಿದೆ. ಕೇವಲ 9 ತಿಂಗಳಲ್ಲಿ ಈ ಹೆಗ್ಗುರುತನ್ನು ಭಾರತ ಸಾಧಿಸಿದೆ ಎಂದು ಪ್ರಧಾನಿ ಹೇಳಿದ್ದರು. 

ನಿನ್ನೆ ಬೆಳಗ್ಗೆ 10 ಗಂಟೆಗೆ ಮುನ್ನ ದೇಶವು 100 ಕೋಟಿ ವ್ಯಾಕ್ಸಿನೇಷನ್ ಮೈಲಿಗಲ್ಲು ಗಡಿಯನ್ನು ತಲುಪಿದ ಸ್ವಲ್ಪ ಸಮಯದ ನಂತರ, ಪ್ರಧಾನಿ ಮೋದಿ ದೇಶದ ಆರೋಗ್ಯ ಸಾಧಕರಿಗೆ ಅಭಿನಂದಿಸಿದ್ದರು. ಈ ಮೈಲಿಗಲ್ಲು ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಮನೋಭಾವದ ವಿಜಯವಾಗಿದೆ ಎಂದು ಅವರು ಬಣ್ಣಿಸಿದ್ದರು. 

ನಂತರ ನಿನ್ನೆ ದೆಹಲಿಯ ಎಐಐಎಂಎಸ್ ಕ್ಯಾಂಪಸ್‌ನಲ್ಲಿ ಹೊಸ ಕಟ್ಟಡವನ್ನು ಉದ್ಘಾಟಿಸಿದ ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, "ಅಕ್ಟೋಬರ್ 21, 2021 ರ ಈ ದಿನ ಇತಿಹಾಸದಲ್ಲಿ ದಾಖಲಾಗುತ್ತದೆ. ಭಾರತ 100 ಕೋಟಿ ಲಸಿಕೆ ಪ್ರಮಾಣವನ್ನು ದಾಟಿದೆ. ಕಳೆದ 100 ವರ್ಷಗಳಲ್ಲಿ ಅತಿದೊಡ್ಡ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ, ದೇಶವು ಈಗ 100 ಕೋಟಿ ಲಸಿಕೆ ಡೋಸ್‌ಗಳ ಬಲವಾದ ರಕ್ಷಣಾತ್ಮಕ ಕ್ರಮವನ್ನು ಸಾಧಿಸಿದೆ. ಈ ಸಾಧನೆಯು ಭಾರತದ ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂದು ಹೊಗಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com