ಮುಂಬೈ: ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಪರ ಮಾಜಿ ಅಡ್ವೊಕೇಟ್ ಜನರಲ್ ಮುಕುಲ್ ರೋಹಟ್ಗಿ ವಾದ ಮಾಡಲಿದ್ದಾರೆ.
ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅ.26 ರಂದು ನಡೆಯಲಿದ್ದು, ಮುಕುಲ್ ರೋಹಟ್ಗಿ ವಾದ ಮಂಡಿಸಲಿದ್ದಾರೆ. ಅ.08 ರಂದು ಆರ್ಯನ್ ಖಾನ್ ನ್ನು ಬಂಧಿಸಲಾಗಿತ್ತು. ಎರಡು ಬಾರಿ ಆತನಿಗೆ ಜಾಮೀನನ್ನು ಕೋರ್ಟ್ ನಿರಾಕರಿಸಿದೆ.
ಈ ನಡುವೆ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧವೇ ಸಾಕ್ಷಿ ಲಂಚದ ಆರೋಪ ಹೊರಿಸಿದ್ದಾರೆ.
ಆದರೆ ಎನ್ ಸಿಬಿ ತನಿಖೆಗೆ ಆದೇಶ ನೀಡಿರುವುದರ ಹೊರತಾಗಿಯೂ ತನ್ನ ಅಧಿಕಾರಿಯ ಪರವಾಗಿ ನಿಂತಿದ್ದು, ಅತ್ಯುತ್ತಮ ಟ್ರಾಕ್ ರೆಕಾರ್ಡ್ ಹೊಂದಿದ್ದಾರೆ ಎಂದು ಹೇಳಿದೆ.
Advertisement