ಪಾಕ್ ಪರ ಘೋಷಣೆ ಕೂಗಿದ ಗುರುಗ್ರಾಮ ವ್ಯಕ್ತಿ ವಿರುದ್ಧ ಕೇಸ್; ಖಿನ್ನತೆ ಇದಕ್ಕೆ ಕಾರಣ ಎಂದ ಪತ್ನಿ

ಅಪಾರ್ಟ್ ಮೆಂಟ್ ನ ಬಾಲ್ಕನಿಯಿಂದ ಪಾಕಿಸ್ತಾನದ ಪರ ಘೋಷಣೆ ವ್ಯಕ್ತಿಯೋರ್ವನ ವಿರುದ್ಧ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಾಕ್ ಧ್ವಜ
ಪಾಕ್ ಧ್ವಜ

ಗುರುಗ್ರಾಮ: ಅಪಾರ್ಟ್ ಮೆಂಟ್ ನ ಬಾಲ್ಕನಿಯಿಂದ ಪಾಕಿಸ್ತಾನದ ಪರ ಘೋಷಣೆ ವ್ಯಕ್ತಿಯೋರ್ವನ ವಿರುದ್ಧ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅನ್ವರ್ ಸಯೀದ್ ಫೈಜುಲ್ಲಾ ಹಶ್ಮಿ ವಿರುದ್ಧ ನೆರೆ ಮನೆಯವರು ಪಾಕ್ ಪರ ಘೋಷಣೆ ಕೂಗಿದ ಆರೋಪ ಮಾಡಿದ್ದರು. ಐಪಿಸಿ 153 ಅಡಿಯಲ್ಲಿ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅನ್ವರ್ ಸಯೀದ್ ಫೈಜುಲ್ಲಾ ಹಶ್ಮಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ನಾಪತ್ತೆಯಾಗಿದ್ದು ಶೋಧಕಾರ್ಯಾಚರಣೆ ನಡೆಯುತ್ತಿದೆ ಎಂದು ಹರ್ಯಾಣ ಪೊಲೀಸರು ತಿಳಿಸಿದ್ದಾರೆ.

ಶನಿವಾರದಂದು, ಗುರುಗ್ರಾಮದಲ್ಲಿರುವ ರೆಸಿಡೆನ್ಷಿಯಲ್ ಸೊಸೈಟಿಯಲ್ಲಿದ್ದ ಈ ವ್ಯಕ್ತಿ ಮಕ್ಕಳಿಗೆ ಪಾಕಿಸ್ತಾನ ಪರ ಘೋಷಣೆ ಕೂಗುವಂತೆ ಕೇಳುತ್ತಿದ್ದ.

ಡಿಸಿಪಿ ಧೀರಜ್ ಸೇತಿಯಾ ಈ ಘಟನೆ ಬಗ್ಗೆ ಎಎನ್ಐ ಗೆ ಮಾಹಿತಿ ನೀಡಿದ್ದು, ಇಂಪೀರಿಯಲ್ ಗಾರ್ಡನ್ ಸೊಸೈಟಿಯ ನಿವಾಸಿ ಪಾಕ್ ಪರ "ಪಾಕಿಸ್ತಾನ್ ಜಿಂದಾಬಾದ್" ಎಂಬ ಘೋಷಣೆ ಕೂಗಿರುವ ವಿಡಿಯೋ ವೈರಲ್ ಆಗತೊಡಗಿದೆ.

ಈ ವ್ಯಕ್ತಿ ವಿರುದ್ಧ ದೂರು ನೀಡಿದ್ದ ನೆರೆ ಮನೆಯವರ ವಿರುದ್ಧ ಅನ್ವರ್ ಸಯೀದ್ ಫೈಜುಲ್ಲಾ ಹಶ್ಮಿಯ ಪತ್ನಿ ಪ್ರತಿ ದೂರು ನೀಡಿದ್ದು, ತನ್ನ ಪತಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೊಸೈಟಿಯ ಇತರ ನಿವಾಸಿಗಳ ವಿರುದ್ಧ ತಮಗೆ ಕಿರುಕುಳ ನೀಡುತ್ತಿರುವ ಆರೋಪವನ್ನೂ ಹಶ್ಮಿಯ ಪತ್ನಿ ಹೊರಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಪತಿ ವಿರುದ್ಧವೂ ಆಕೆ ಕೌಟುಂಬಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ.

"ಅನ್ವರ್ ನಿಜವಾಗಿಯೂ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯಾಗಿದ್ದಾನಾ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com