ಶತಮಾನೋತ್ಸವ ವರ್ಷದ ವೇಳೆಗೆ ಆರ್ ಎಸ್ ಎಸ್ ಪ್ರತಿ ಮನೆ ತಲುಪಬೇಕು: ಮೋಹನ್ ಭಾಗವತ್

ರಾಷ್ಟ್ರೀಯ ಸ್ವಯಂಸೇವಕ ಸಂಘವು ನಾಲ್ಕು ವರ್ಷಗಳ ಬಳಿಕ ತನ್ನ ಶತಮಾನೋತ್ಸವವನ್ನು ಆಚರಿಸುವ ವೇಳೆಗೆ ಸಂಘಟನೆಯ ಗುರಿಯು ಪ್ರತಿ ಮನೆಯನ್ನು ತಲುಪಿರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ
ಮೋಹನ್ ಭಾಗವತ್
ಮೋಹನ್ ಭಾಗವತ್
Updated on

ಜಾರ್ಖಂಡ್: ರಾಷ್ಟ್ರೀಯ ಸ್ವಯಂಸೇವಕ ಸಂಘವು ನಾಲ್ಕು ವರ್ಷಗಳ ಬಳಿಕ ತನ್ನ ಶತಮಾನೋತ್ಸವವನ್ನು ಆಚರಿಸುವ ವೇಳೆಗೆ ಸಂಘಟನೆಯ ಗುರಿಯು ಪ್ರತಿ ಮನೆಯನ್ನು ತಲುಪಿರಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. 

ಸಂಘಟನೆಯ ಬೆಳವಣಿಗೆ ಅವಲೋಕನಕ್ಕಾಗಿ ಮೂರು ದಿನಗಳ ಭೇಟಿ ಅಂಗವಾಗಿ ಶುಕ್ರವಾರ ಜಾರ್ಖಂಡ್‌ನ ಧನಬಾದ್ ತಲುಪಿದ ಆರ್‌ಎಸ್‌ಎಸ್ ಮುಖ್ಯಸ್ಥರು, ಜಾರ್ಖಂಡ್ ಮತ್ತು ಬಿಹಾರದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದರು.

'ಸಂಘಟನೆಯು 2025ಕ್ಕೆ 100 ವರ್ಷಗಳನ್ನು ಪೂರೈಸುವ ವೇಳೆಗೆ, ಎಲ್ಲಾ ಗ್ರಾಮಗಳಲ್ಲಿ ಶಾಖೆಗಳ ವಿಸ್ತರಣೆಯೊಂದಿಗೆ ಸ್ವಯಂ ಸೇವಕರು ಪ್ರತಿ ಮನೆಗೂ ತಲುಪಬೇಕು. ಹೀಗೆ ಮಾಡಲು ಎಲ್ಲರೂ ಶ್ರಮವಹಿಸಬೇಕು ಎಂದು ಸಲಹೆ ನೀಡಿದ ಅವರು, ಆರ್‌ಎಸ್‌ಎಸ್ ಸದಸ್ಯರಿಗೆ ಅವರ ನಡವಳಿಕೆ ಹೇಗಿರಬೇಕು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಅವರ ಜೀವನವನ್ನು ಹೇಗೆ ಮೀಸಲಿಡಬೇಕು ಎಂದು ತಿಳಿಸಲಾಗಿದೆ ಎಂದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com