ಡ್ರೋನ್
ಡ್ರೋನ್

ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್‌ ಬಳಸಲು ಐಸಿಎಂಆರ್‌ಗೆ ವಿಮಾನಯಾನ ಸಚಿವಾಲಯದಿಂದ ಷರತ್ತುಬದ್ಧ ಅನುಮತಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಕೊರೋನಾ ಲಸಿಕೆಗಳನ್ನು ವಿಸ್ತರಿಸಲು ಡ್ರೋನ್‌ಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಹೇಳಿದೆ.
Published on

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಕೊರೋನಾ ಲಸಿಕೆಗಳನ್ನು ವಿಸ್ತರಿಸಲು ಡ್ರೋನ್‌ಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಹೇಳಿದೆ.

ಲಸಿಕೆಗಳನ್ನು ನೀಡಲು 3,000 ಮೀಟರ್‌ಗಳಷ್ಟು ಎತ್ತರದವರೆಗೆ ಡ್ರೋನ್‌ಗಳನ್ನು ಬಳಸಲು ಐಸಿಎಂಆರ್‌ಗೆ ಅನುಮತಿ ನೀಡಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಎರಡು ದಿನಗಳ ಹಿಂದೆ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮೊದಲ ಬಾರಿಗೆ ತೆಲಂಗಾಣದ ವಿಕಾರಾಬಾದ್‌ನಲ್ಲಿ 'ಆಕಾಶದ ಮೂಲಕ ಔಷಧ' ಯೋಜನೆಯನ್ನು ಪ್ರಾರಂಭಿಸಿದರು. ಇದರ ಅಡಿಯಲ್ಲಿ ಡ್ರೊನ್‌ಗಳನ್ನು ಬಳಸಿ ಔಷಧಗಳು ಮತ್ತು ಲಸಿಕೆಗಳನ್ನು ವಿತರಿಸಲಾಗುವುದು.

ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ತನ್ನ ಸ್ವಂತ ಆವರಣದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಪರೀಕ್ಷಾ ಉದ್ದೇಶಗಳಿಗಾಗಿ ಡ್ರೋನ್‌ಗಳನ್ನು ಬಳಸಲು ಷರತ್ತುಬದ್ಧ ಅನುಮತಿಯನ್ನು ಪಡೆದಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಐಐಟಿ ಮತ್ತು ಐಸಿಎಂಆರ್ - ಎರಡೂ ಸಂಸ್ಥೆಗಳಿಗೆ 2021ರ ಡ್ರೋನ್ ನಿಯಮಗಳ ಅಡಿಯಲ್ಲಿ ಷರತ್ತುಬದ್ಧ ವಿನಾಯಿತಿಯನ್ನು ನೀಡಲಾಗಿದೆ. ಆಗಸ್ಟ್ 25ರಂದು ಸಚಿವಾಲಯವು ಡ್ರೋನ್ ನಿಯಮಗಳನ್ನು ಸೂಚಿಸಿತು. ಅದು ಡ್ರೋನ್‌ಗಳ ಮೇಲೆ ನಿಯಂತ್ರಕ ಆಡಳಿತವನ್ನು ಉದಾರಗೊಳಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com