ಆ.1 ರಿಂದ ಸೆ.11 ವರೆಗೆ ಭಾರತದಲ್ಲಿ ಹೊಸ ನೋಂದಣಿಗಾಗಿ ದಾಖಲಾಗಿದ್ದು 736 ಅಫ್ಘನ್ನರು: ಯುಎನ್ ಹೆಚ್ ಸಿಆರ್

ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಆ.1 ರಿಂದ ಸೆ.11 ವರೆಗೆ 736 ಅಫ್ಘನ್ನರು ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿರುವ ಯುಎನ್ ಹೆಚ್ ಸಿಆರ್ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿರುವ ಅಫ್ಘನ್ನರು
ನವದೆಹಲಿಯಲ್ಲಿರುವ ಯುಎನ್ ಹೆಚ್ ಸಿಆರ್ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿರುವ ಅಫ್ಘನ್ನರು
Updated on

ನವದೆಹಲಿ: ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಆ.1 ರಿಂದ ಸೆ.11 ವರೆಗೆ 736 ಅಫ್ಘನ್ನರು ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಭಾರತದಲ್ಲಿನ ಅಫ್ಘನ್ನರ  ನೋಂದಣಿ ಹಾಗೂ ನೆರವಿನ ಮನವಿಗೆ ಸ್ಪಂದಿಸಲು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದಾಗಿ ಯುಎನ್ ಹೆಚ್ ಸಿಆರ್ ಹೇಳಿದೆ.

ವೀಸಾ ನೀಡುವುದು, ವೀಸಾ ವಿಸ್ತರಣೆ ಸೇರಿದಂತೆ ಅಫ್ಘಾನಿಸ್ತಾನದ ಪ್ರಜೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತ ಸರ್ಕಾರದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿರುವುದಾಗಿ ವಿಶ್ವಸಂಸ್ಥೆ ನಿರಾಶ್ರಿತರ ವಿಭಾಗ ತಿಳಿಸಿದೆ.

ಅಂಕಿ-ಅಂಶಗಳ ಪ್ರಕಾರ ಯುಎನ್ ಹೆಚ್ ಆರ್ ಸಿ ಕಳವಳ ಪಡುತ್ತಿರುವ 43,157 ಮಂದಿ ಭಾರತದಲ್ಲಿದ್ದು ಈ ಪೈಕಿ 15,559 ನಿರಾಶ್ರಿತರು ಹಾಗೂ ಆಶ್ರಯ ಬೇಡುವವರು ಅಫ್ಗಾನಿಸ್ತಾನದವರಾಗಿದ್ದಾರೆ.

ಆ.1 ರಿಂದ ಸೆ.11 ವರೆಗೆ 736 ಅಫ್ಘನ್ನರು ಯುಎನ್ ಹೆಚ್ ಸಿಆರ್ ಗೆ ಹೊಸ ನೋಂದಣಿಗಾಗಿ ದಾಖಲಿಸಿಕೊಂಡಿದ್ದಾರೆ. ಈ ಪೈಕಿ 2021 ರಲ್ಲಿ ಭಾರತಕ್ಕೆ ಬಂದಿರುವವರಿದ್ದು, ಈ ಹಿಂದೆ ಇತ್ಯರ್ಥಗೊಂಡಿದ್ದ ಆಶ್ರಯಕ್ಕಾಗಿ ಮನವಿ ಸಲ್ಲಿಸಿದ್ದವರು, ವಿದ್ಯಾರ್ಥಿಗಳು, ಉದ್ಯಮಿಗಳು ಅಥವಾ ವೈದ್ಯಕೀಯ, ಇನ್ನಿತರ ವೀಸಾಗಳಿಗಾಗಿ ಮನವಿ ಸಲ್ಲಿಸಿದ್ದು ವಾಪಸ್ ಅಫ್ಘಾನಿಸ್ತಾನಕ್ಕೆ ತೆರಳಲು ಸಾಧ್ಯವಾಗದವರಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com