ಮನೆ ನಿಭಾಯಿಸಲು ಮಹಿಳಾ ಕಾನ್ಸ್‌ಟೇಬಲ್‌ಗಳ ಕರ್ತವ್ಯದ ಸಮಯ ಕಡಿತಗೊಳಿಸಿದ ಮಹಾರಾಷ್ಟ್ರ

ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮತೋಲನಗೊಳಿಸಲು ಸಹಾಯ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಮಹಿಳಾ ಕಾನ್ಸ್‌ಟೇಬಲ್‌ಗಳ ಕೆಲಸದ ಸಮಯವನ್ನು 12 ಗಂಟೆಯಿಂದ ಎಂಟು ಗಂಟೆಗೆ ಇಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮತೋಲನಗೊಳಿಸಲು ಸಹಾಯ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಮಹಿಳಾ ಕಾನ್ಸ್‌ಟೇಬಲ್‌ಗಳ ಕೆಲಸದ ಸಮಯವನ್ನು 12 ಗಂಟೆಯಿಂದ ಎಂಟು ಗಂಟೆಗೆ ಇಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆ ಈ ಕ್ರಮದ ಅನುಷ್ಠಾನವನ್ನು ಖಚಿತಪಡಿಸಿದ್ದಾರೆ. ಇದನ್ನು ಮೊದಲು ನಾಗ್ಪುರ ನಗರ, ಅಮರಾವತಿ ನಗರ ಮತ್ತು ಪುಣೆ ಗ್ರಾಮಾಂತರದಲ್ಲಿ ಜಾರಿಗೊಳಿಸಲಾಗುವುದು. ಕಳೆದ ತಿಂಗಳು ಮೂರು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಈ ಕ್ರಮವನ್ನು ಜಾರಿಗೊಳಿಸಲಾಗಿದೆ ಮತ್ತು ಕೆಲವು ದಿನಗಳಲ್ಲಿ ರಾಜ್ಯದ ಇತರ ನಗರ ಮತ್ತು ಜಿಲ್ಲೆಗಳಲ್ಲೂ ಮಹಿಳಾ ಕಾನ್ಸ್‌ಟೇಬಲ್‌ಗಳ ಕರ್ತವ್ಯದ ಸಮಯ ಕಡಿತಗೊಳಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಮಹಿಳಾ ಕಾನ್ಸ್‌ಟೇಬಲ್‌ಗಳ ಬದ್ಧತೆಗಳನ್ನು ಪರಿಗಣಿಸಿ ಅವರು ವೃತ್ತಿಪರ ಕರ್ತವ್ಯಗಳಲ್ಲದೆ ಮನೆಯನ್ನೂ ನಿಬಾಯಿಸುವ ಅಗತ್ಯ ಇದೆ. ಹೀಗಾಗಿ ಒಂದು ತಿಂಗಳ ಹಿಂದೆ ಅವರ ಕೆಲಸದ ಅವಧಿ ಕಡಿತಗೊಳಿಸಲಾಗಿದ್ದು, ಅದು ಉತ್ತಮ ಫಲಿತಾಂಶ ನೀಡಿದೆ ಎಂದು ಅವರು ಹೇಳಿದ್ದಾರೆ.

ಮಹಿಳಾ ಕಾನ್ಸ್‌ಟೇಬಲ್‌ಗಳು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸಲು ಸಹಾಯ ಮಾಡಲು ಈ ಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಆಗಸ್ಟ್ 28 ರಿಂದ ಈ ಕ್ರಮವನ್ನು ಮೊದಲು ಜಾರಿಗೆ ತಂದ ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com