ತೃತೀಯ ಲಿಂಗಿಗಳಿಗೆ ಉಚಿತ ಲಸಿಕೆ: ಎನ್ ಜಿ ಒಗಳಿಂದ 'ಪರಿವರ್ತನ್ ಕಾ ಟೀಕಾ' ಲಸಿಕಾ ಅಭಿಯಾನ
ನವದೆಹಲಿ: ವಿಲ್ಲೂ ಪೂನಾವಾಲಾ ಚಾರಿಟಬಲ್ ಫೌಂಡೇಶನ್ ಮತ್ತು ಕಿನೀರ್ ಸರ್ವೀಸಸ್ ರಾಷ್ಟ್ರವ್ಯಾಪಿ ಉಚಿತ ಲಸಿಕೆ ಅಭಿಯಾನವನ್ನು ಆಯೋಜಿಸಿದೆ. ದೇಶಾದ್ಯಂತ ಇರುವ 200 ಅಪೋಲೊ ಆಸ್ಪತ್ರೆಗಳಲ್ಲಿ ಈ ಅಭಿಯಾನ ಜಾರಿಗೊಳ್ಳುತ್ತಿದೆ.
ಅಭಿಯಾನದ ಭಾಗವಾಗಿ ಅಪೊಲೊ ಆಸ್ಪತ್ರೆಗಳ 200 ಕೇಂದ್ರಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜನೆಗೊಳ್ಳಲಿದೆ. ತೃತೀಯ ಲಿಂಗಿ ಸಮುದಾಯಗಳು ಮತ್ತು ಅವರಿಗಾಗಿ ಕೆಲಸ ನಿರ್ವಹಿಸುತ್ತಿರುವ ಎನ್ ಜಿಒಗಳು ಈ ಅಭಿಯಾನದಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಲಬಹುದು.
ತೃತೀಯ ಲಿಂಗಿಗಳು ತಮ್ಮ ಪ್ರದೇಶದ ಹತ್ತಿರದಲ್ಲಿರುವ ಅಪೊಲೊ ಆಸ್ಪತ್ರೆಗೆ ತೆರಳಿ ಉಚಿತ ಲಸಿಕೆ ಪಡೆದುಕೊಳ್ಳಬಹುದು. ಮುಂದಿನ ಆರು ತಿಂಗಳಲ್ಲಿ ತೃತೀಯ ಲಿಂಗಿಗಳ ಸಮುದಾಯದ ಎಲ್ಲಾ ಸದಸ್ಯರಿಗೆ ಸಂಪೂರ್ಣವಾಗಿ ಲಸಿಕೆ ನೀಡುವುದು ಅಭಿಯಾನದ ಗುರಿ.
Related Article
ಕೋವಿಡ್-19: ಭಾರತದಲ್ಲಿಂದು 29,616 ಹೊಸ ಕೇಸ್ ಪತ್ತೆ, 290 ಮಂದಿ ಸಾವು
ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 81.39 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ: ಕೇಂದ್ರ ಸರ್ಕಾರ
ಭಾರತ ಮಾಡಿದ್ದನ್ನು ಬೇರೆ ಯಾವುದೇ ದೇಶ ನಿರ್ವಹಿಸಲು ಸಾಧ್ಯವಾಗಲಿಲ್ಲ: ಕೊವಿಡ್ ಪರಿಹಾರ ಯೋಜನೆ ಶ್ಲಾಘಿಸಿದ 'ಸುಪ್ರೀಂ'
ಕೋವಿಡ್-19 ಸಂತ್ರಸ್ತರ ಕುಟುಂಬ ಸದಸ್ಯರಿಗೆ 50 ಸಾವಿರ ರೂ. ಕೃಪಾಧನ (ಎಕ್ಸ್-ಗ್ರೇಷಿಯಾ) ಮಾರ್ಗಸೂಚಿಗೆ ಸುಪ್ರೀಂ ಸಂತಸ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ