ಸರತಿಸಾಲು ಉಲ್ಲಂಘಿಸಿ ಲಸಿಕೆ ನೀಡಲು ಕೇಳಿದ ವ್ಯಕ್ತಿ: ನಿರಾಕರಿಸಿದ ವೈದ್ಯರ ಮೇಲೆ ಕೊಡಲಿಯಿಂದ ಹಲ್ಲೆ!

 32 ವರ್ಷದ ವ್ಯಕ್ತಿಯೋರ್ವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)
ಕೋವಿಡ್-19 ಲಸಿಕೆ (ಸಾಂಕೇತಿಕ ಚಿತ್ರ)

ಯಾವತ್ಮಲ್: 32 ವರ್ಷದ ವ್ಯಕ್ತಿಯೋರ್ವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ. 

ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ಈ ಘಟನೆ ನಡೆದಿದೆ. "ಕೋವಿಡ್-19 ಲಸಿಕೆ ನೀಡಲು ಇದ್ದ ಸರತಿ ಸಾಲನ್ನು ದಾಟಿ ಮುಂದೆ ಹೋಗಿ ಲಸಿಕೆ ಪಡೆಯಲು ಅವಕಾಶ ನೀಡದ್ದಕ್ಕಾಗಿ ಆಕ್ರೋಶಗೊಂಡ ವ್ಯಕ್ತಿ ವೈದ್ಯಕೀಯ ಅಧಿಕಾರಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಅದೃಷ್ಟವಶಾತ್ ವೈದ್ಯರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಮನೋಹರ್ ರಾಥೋಡ್ ಎಂಬಾತ ಏಕಾ ಏಕಿ ಲಸಿಕೆ ಕೇಂದ್ರಕ್ಕೆ ಆಗಮಿಸಿ ಸರತಿಸಾಲಿಗಿಂತಲೂ ಮುನ್ನ ತನಗೆ ಲಸಿಕೆ ನೀಡಬೇಕೆಂದು ಒತ್ತಾಯಿಸಿದ್ದ. ಆದರೆ ವೈದ್ಯ ಡಾ. ಸಂತೋಷ್ ಜಾಧವ್ ಇದಕ್ಕೆ ಒಪ್ಪದೇ ಮೊದಲು ನೋಂದಣಿ ಮಾಡಿಸಲು ಹೇಳಿದರು. ಈ ವೇಳೆ ಆಕ್ರೋಶಗೊಂಡ ವ್ಯಕ್ತಿ ವೈದ್ಯರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ವೈದ್ಯರು ಹಿಂದೆ ಸರಿದು ತಮ್ಮ ಮೇಲೆ ಬೀಳಬಹುದಾಗಿದ್ದ ಪೆಟ್ಟಿನಿಂದ ತಪ್ಪಿಸಿಕೊಂಡಿದ್ದಾರೆ. ಜಾಧವ್ ಅವರ ದೂರಿನ ಆಧಾರದಲ್ಲಿ ಈತನನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com