ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿಯಿಂದ ಖಾತೆ ಹಂಚಿಕೆ, ಡಿಸಿಎಂ ರಾಂಧವಗೆ ಗೃಹ

ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಮಂಗಳವಾರ ಹೊಸ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ್ದು, ತಮ್ಮ ಬಳಿ 14 ಇಲಾಖೆಗಳನ್ನು ಉಳಿಸಿಕೊಂಡು, ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ....
ಚರಣಜಿತ್ ಸಿಂಗ್ ಚನ್ನಿ
ಚರಣಜಿತ್ ಸಿಂಗ್ ಚನ್ನಿ

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ಮಂಗಳವಾರ ಹೊಸ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ್ದು, ತಮ್ಮ ಬಳಿ 14 ಇಲಾಖೆಗಳನ್ನು ಉಳಿಸಿಕೊಂಡು, ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ ಅವರಿಗೆ ಗೃಹ ಖಾತೆ ಮತ್ತು ಮತ್ತೊಬ್ಬ ಉಪ ಮುಖ್ಯಮಂತ್ರಿ ಒ ಪಿ ಸೋನಿ ಅವರಿಗೆ ಆರೋಗ್ಯ ಖಾತೆ ನೀಡಿದ್ದಾರೆ.

ಸೆಪ್ಟೆಂಬರ್ 20 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚನ್ನಿ, ಸ್ಥಳೀಯ ಆಡಳಿತ, ಸಂಸದೀಯ ವ್ಯವಹಾರಗಳ ಇಲಾಖೆಯನ್ನು  ಸಂಪುಟದ ಹಿರಿಯ ಸಹೋದ್ಯೋಗಿ ಬ್ರಹ್ಮ ಮೊಹಿಂದ್ರ ಅವರಿಗೆ ನೀಡಿದ್ದಾರೆ.

ಮುಖ್ಯಮಂತ್ರಿ ಚೆನ್ನಿ ಅವರು ವಿದ್ಯುತ್, ಅಬಕಾರಿ, ಗಣಿಗಾರಿಕೆ ಮತ್ತು ಭೂವಿಜ್ಞಾನ, ಪರಿಸರ ಹಾಗೂ ನಾಗರಿಕ ವಿಮಾನಯಾನ ಸೇರಿದಂತೆ 14 ಖಾತೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com