18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆಯ್ಕೆ ಮಾಡಲು ಸ್ವತಂತ್ರರು: ಸುಪ್ರೀಂ ಕೋರ್ಟ್ 

18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಮಾಟ-ಮಂತ್ರ ಮತ್ತು ಧಾರ್ಮಿಕ ಬಲತ್ಕಾರದ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಮಾಟ-ಮಂತ್ರ ಮತ್ತು ಧಾರ್ಮಿಕ ಬಲತ್ಕಾರದ ಮತಾಂತರವನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಬಿ ಆರ್ ಗವಾಯಿ ಮತ್ತು ಹೃಷಿಕೇಶ್ ರಾಯ್ ನೇತೃತ್ವದ ನ್ಯಾಯಪೀಠ ಅರ್ಜಿದಾರ ವಕೀಲ ಅಶ್ವಿನ್ ಉಪಾಧ್ಯಾಯ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರ ಮುಂದೆ ತೀರ್ಪು ನೀಡಿ, ಸಂವಿಧಾನ ವಿಧಿ 32ರ ಅಡಿಯಲ್ಲಿ ಯಾವ ರೀತಿಯ ರಿಟ್ ಅರ್ಜಿಯನ್ನು ಹಾಕಿದ್ದೀರಿ, ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ನೀವು. ನೀವು ಹೀಗೆ ಅರ್ಜಿ ಹಾಕಿ ವಾದ ಮಾಡುವುದಕ್ಕೆ ನೀವೇ ಹೊಣೆ ಎಂದು ಛೀಮಾರಿ ಹಾಕಿದೆ.

18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ತನ್ನ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಬಿಡದಿರಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಸಂವಿಧಾನದಲ್ಲಿ ಪ್ರಚಾರ ಎಂಬ ಪದ ಇರುವುದಕ್ಕೆ ಒಂದು ಕಾರಣವಿದೆ ಎಂದು ಅರ್ಜಿ ಸಲ್ಲಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರಿಗೆ ಛೀಮಾರಿ ಹಾಕಿದೆ.

ನಂತರ ಅರ್ಜಿಯನ್ನು ಹಿಂಪಡೆಯಲು ಕೋರಿದ ಹಿರಿಯ ವಕೀಲ ಶಂಕರನಾರಾಯಣ ಸರ್ಕಾರ ಮತ್ತು ಕಾನೂನು ಆಯೋಗದ ಪ್ರತಿನಿಧಿಯನ್ನಾಗಿ ಮಾಡಲು ಅನುಮತಿ ಕೇಳಿದರು.

ಆದರೆ ನ್ಯಾಯಪೀಠ ಪ್ರತಿನಿಧಿತ್ವಕ್ಕೆ ಅನುಮತಿ ನೀಡಲು ನಿರಾಕರಿಸಿ ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಪರಿಗಣಿಸಿ ವಜಾ ಮಾಡಿತು.

ಧರ್ಮವನ್ನು ಮತಾಂತರ ಮಾಡುವುದು ಧರ್ಮಕ್ಕೆ ಮಾಡುವ ನಿಂದನೆ ಎಂದು ಪರಿಗಣಿಸಿ ಧರ್ಮ ಪರಿವರ್ತನೆ ಕಾಯ್ದೆಯನ್ನು ಜಾರಿಗೊಳಿಸಿಸಲು ಸಮಿತಿ ರಚಿಸುವ ಸಾಧ್ಯತೆಯನ್ನು ನೋಡಬೇಕೆಂದು ವಕೀಲ ಅಶ್ವಿನ್ ಉಪಾಧ್ಯಾಯ್ ಅರ್ಜಿಯಲ್ಲಿ ಕೋರಿದ್ದರು.

ಧಾರ್ಮಿಕ ಮತಾಂತರ ಬದಲಾವಣೆಗೆ ತಡೆ ಸಂವಿಧಾನ ವಿಧಿ 14,21,25ಕ್ಕೆ ಅಪರಾಧ ಮಾಡಿದಂತೆ ಆಗುತ್ತದೆಯಲ್ಲದೆ ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾಗಿದೆ, ಜಾತ್ಯತೀತತೆ ಸಂವಿಧಾನ ಮೂಲ ರಚನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com