ಬಂಗಾಳ ಚುನಾವಣೆ: ಕೋವಿಡ್ ಸುರಕ್ಷತಾ ಮಾನದಂಡ ಉಲ್ಲಂಘನೆ ಬಳಿಕ ರೋಡ್ ಶೋ, ದೊಡ್ಡ ರ್ಯಾಲಿಗಳಿಗೆ ಇಸಿ ನಿಷೇಧ!
ರಾಜಕೀಯ ಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕೋವಿಡ್ -19 ಮಾನದಂಡಗಳ ತೀವ್ರ ಉಲ್ಲಂಘನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ರೋಡ್ ಶೋ, ಮೆರವಣಿಗೆ ಮತ್ತು ಬೈಕ್ ರ್ಯಾಲಿಗಳನ್ನು ಚುನಾವಣಾ ಆಯೋಗ ನಿಷೇಧಿಸಿದೆ.
Published: 22nd April 2021 11:40 PM | Last Updated: 22nd April 2021 11:40 PM | A+A A-

ಚುನಾವಣಾ ರ್ಯಾಲಿಗಳು
ಕೋಲ್ಕತಾ: ರಾಜಕೀಯ ಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕೋವಿಡ್ -19 ಮಾನದಂಡಗಳ ತೀವ್ರ ಉಲ್ಲಂಘನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ರೋಡ್ ಶೋ, ಮೆರವಣಿಗೆ ಮತ್ತು ಬೈಕ್ ರ್ಯಾಲಿಗಳನ್ನು ಚುನಾವಣಾ ಆಯೋಗ ನಿಷೇಧಿಸಿದೆ.
500 ಜನರ ಮಿತಿಯನ್ನು ಮೀರಿದ ಯಾವುದೇ ಸಾರ್ವಜನಿಕ ಸಭೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಸಮಿತಿ ಹೇಳಿದೆ. ಮತದಾನ ಸಮಿತಿಯು ತನ್ನ ನಡೆಯನ್ನು ವಿವರಿಸುತ್ತಾ, "ಆಯೋಗವು ಚುನಾವಣಾ ಸಭೆಗಳು ಮತ್ತು ಅಭಿಯಾನಗಳ ಹಲವಾರು ನಿದರ್ಶನಗಳನ್ನು ಗಮನಿಸಿದೆ. ಇದರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಹಲವಾರು ಮಾರ್ಗಸೂಚಿಗಳನ್ನು ಕಡೆಗಣಿಸಲಾಗಿದೆ. ಹೀಗಾಗಿ ಇದೀಗ ರೋಡ್ ಶೋ, ಬೃಹತ್ ರ್ಯಾಲಿಗಳಿಗೆ ನಿಷೇದ ಹೇರಿದೆ.
ಬಂಗಾಳ ಚುನಾವಣೆಯಲ್ಲಿ ಕೋವಿಡ್ ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸುವ ಬಗ್ಗೆ ಕೋಲ್ಕತಾ ಹೈಕೋರ್ಟ್ ಚುನಾವಣಾ ಸಮಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಲವೇ ಗಂಟೆಗಳ ನಂತರ ಚುನಾವಣಾ ಆಯೋಗ ಈ ಆದೇಶ ಹೊರಡಿಸಿದೆ.
ಕೋವಿಡ್ ಮಾನದಂಡಗಳ ಅನುಷ್ಠಾನ ಕುರಿತಂತೆ ಸಲ್ಲಿಕೆಯಾಗಿದ್ದ ಮೂರು ಪಿಐಎಲ್ ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿಬಿಎನ್ ರಾಧಾಕೃಷ್ಣನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೀಗೆ ಹೇಳಿತು. "ಚುನಾವಣಾ ಆಯೋಗವು ಕಾರ್ಯನಿರ್ವಹಿಸುವ ಅಧಿಕಾರ ಹೊಂದಿದೆ ಆದರೆ ಈ ಕೋವಿಡ್ ಕಾಲದಲ್ಲಿ ಮತದಾನದ ಬಗ್ಗೆ ಏನು ಮಾಡುತ್ತಿದೆ? ಇಸಿ ಕೇವಲ ಸುತ್ತೋಲೆಗಳನ್ನು ಹೊರಡಿಸಿದೆ ಹೊರತು ಅದರ ಮೇಲ್ವಿಚಾರಣೆ ನಡೆಸುತ್ತಿಲ್ಲ. ಇದರಿಂದ ಕೋವಿಡ್ ಉಲ್ಪಣವಾಗುತ್ತದೆ ಎಂದು ಎಚ್ಚರಿಸಿದ್ದರು.