ಸೆರಂ ಇನ್ಸ್ಟಿಟ್ಯೂಟ್ ಸಿಇಒ ಆಧಾರ್ ಪೂನಾವಾಲಾಗೆ ಸಿಆರ್ ಪಿಎಫ್ ನಿಂದ 'ವೈ' ಕೆಟಗರಿ ಭದ್ರತೆ

"ಸಂಭಾವ್ಯ ಬೆದರಿಕೆ" ಎದುರಿಸುತ್ತಿರುವ ಉದ್ಯಮಿ, ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಅವರಿಗೆ ಸಿಆರ್‌ಪಿಎಫ್ ಭಾರತದಾದ್ಯಂತ 'ವೈ' ಕೆಟಗರಿ ಭದ್ರತೆ ನೀಡಿದೆ ಕೇಂದ್ರ ಸರ್ಕಾರದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಆಧಾರ್ ಪೂನಾವಾಲಾ
ಆಧಾರ್ ಪೂನಾವಾಲಾ

ನವದೆಹಲಿ: "ಸಂಭಾವ್ಯ ಬೆದರಿಕೆ" ಎದುರಿಸುತ್ತಿರುವ ಉದ್ಯಮಿ, ಕೋವಿಶೀಲ್ಡ್ ಲಸಿಕೆ ಉತ್ಪಾದಕ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆಧಾರ್ ಪೂನಾವಾಲಾ ಅವರಿಗೆ ಸಿಆರ್‌ಪಿಎಫ್ ಭಾರತದಾದ್ಯಂತ 'ವೈ' ಕೆಟಗರಿ ಭದ್ರತೆ ನೀಡಿದೆ ಕೇಂದ್ರ ಸರ್ಕಾರದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಪೂನವಾಲಾಗೆ ಭದ್ರತೆ ಕೋರಿ ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ನಿರ್ದೇಶಕ, ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಏಪ್ರಿಲ್ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ನಂತರ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ.

ಅಧಿಕಾರಿಗಳ ಪ್ರಕಾರ, ಪೂನವಾಲಾಗೆ "ಸಂಭವನೀಯ ಬೆದರಿಕೆಗಳನ್ನು" ಗಮನದಲ್ಲಿಟ್ಟುಕೊಂಡು ರಕ್ಷಣೆ ನೀಡಲಾಗಿದೆ.
 

ಕೇಂದ್ರ ರಿಸರ್ವ್ ಪೊಲೀಸ್ ಪಡೆಯ(ಸಿಆರ್‌ಪಿಎಫ್) ಸಶಸ್ತ್ರ ಕಮಾಂಡೋಗಳು ಅವರು ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸುವಾಗಲೆಲ್ಲಾ ಅವರೊಂದಿಗೆ ಇರುತ್ತಾರೆ. 'ವೈ' ಕೆಟಗರಿ ಭದ್ರತೆಯೂ 4-5 ಸಶಸ್ತ್ರ ಕಮಾಂಡೋಗಳನ್ನು ಹೊಂದಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com