ರೋಹಿಂಗ್ಯಾ ಮುಸ್ಲಿಮರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ: ಕೇಂದ್ರ ಸರ್ಕಾರ

ರೋಹಿಂಗ್ಯಾ ಮುಸ್ಲಿಂ ವಲಸಿಗರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.
ರೋಹಿಂಗ್ಯಾ ಮುಸ್ಲಿಂರು
ರೋಹಿಂಗ್ಯಾ ಮುಸ್ಲಿಂರು

ನವದೆಹಲಿ: ರೋಹಿಂಗ್ಯಾ ಮುಸ್ಲಿಂ ವಲಸಿಗರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

ಸೂಕ್ತ ಪ್ರಯಾಣ ದಾಖಲೆ ಇಲ್ಲದೇ ದೇಶದೊಳಗೆ ಬರುವ ವಿದೇಶಿ ಪ್ರವಾಸಿಗರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದರು. ಕೆಲ ರೋಹಿಂಗ್ಯಾ ವಲಸಿಗರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ವರದಿಗಳು ಇರುವುದಾಗಿ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು. 

ಅಕ್ರಮ ವಲಸಿಗರ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಲು ಗುಪ್ತಚರ ಏಜೆನ್ಸಿ ಮತ್ತು  ಕಾನೂನು ಜಾರಿ ಸಂಸ್ಥೆಗಳಿಗೆ ಸಲಹೆ ನೀಡುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವುದಾಗಿ  ನಿತ್ಯಾನಂದ ರೈಹೇಳಿದರು. 

ರೋಹಿಂಗ್ಯಾ ಮುಸ್ಲಿಂರ  ಜೀವನ ಚರಿತ್ರೆ ಮತ್ತು ಬಯೋ ಮೆಟ್ರಿಕ್ ಸೆರೆ ಹಿಡಿಯುಲು ಮತ್ತು ನಕಲಿ ಭಾರತೀಯ ದಾಖಲೆ ರದ್ದುಪಡಿಸಲು ಸೂಚಿಸಿರುವುದಾಗಿ ತಿಳಿಸಿದರು.  

ಕಾನೂನು ವಿನಾಯಿತಿ ಅಡಿಯಲ್ಲಿ ಗಡಿಪಾರು ಪ್ರಕ್ರಿಯೆಗಳು ಸೇರಿದಂತೆ ಸೂಕ್ತ ಕಾನೂನು ಪ್ರಕ್ರಿಯೆ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು. ವಿದೇಶಿ ಪ್ರಜೆಗಳು ಅಕ್ರಮ ವಲಸೆ ಮತ್ತು ಧೀರ್ಘ ವಾಸ ಸಮಸ್ಯೆ ನಿಭಾಯಿಸಲು  ಮಾರ್ಚ್ 30 ರಂದು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ರೈ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com