ಉಭಯ ಸದನದಲ್ಲೂ ಒಬಿಸಿ ಮಸೂದೆಗೆ ಅಂಗೀಕಾರ ದೇಶದ ಪಾಲಿಗೆ ಮಹತ್ವದ ಕ್ಷಣ: ಪ್ರಧಾನಿ ನರೇಂದ್ರ ಮೋದಿ

ಸಂಸತ್ ನ ಉಭಯ ಸದನಗಳಲ್ಲೂ ಒಬಿಸಿ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದನ್ನು ಶ್ಲಾಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇದು ದೇಶದ ಪಾಲಿಗೆ ಹೆಗ್ಗುರುತಿನ ಕ್ಷಣ ಎಂದು ಹೇಳಿದ್ದಾರೆ. 
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಸಂಸತ್ ನ ಉಭಯ ಸದನಗಳಲ್ಲೂ ಒಬಿಸಿ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದನ್ನು ಶ್ಲಾಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇದು ದೇಶದ ಪಾಲಿಗೆ ಹೆಗ್ಗುರುತಿನ ಕ್ಷಣ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವ ವಿಚಾರದಲ್ಲಿ ಅವಕಾಶ ಮತ್ತು ನ್ಯಾಯವನ್ನು ಖಾತರಿಪಡಿಸುವ ತನ್ನ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳುತ್ತದೆ ಎಂದು ಟ್ವೀಟಿಸಿದ್ದಾರೆ.

ರಾಜ್ಯಗಳು ತಮ್ಮ ಒಬಿಸಿ ಪಟ್ಟಿಗಳನ್ನು ಮಾಡುವ ಅಧಿಕಾರವನ್ನು ಮರುಸ್ಥಾಪಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಸಹ ಬೆಂಬಲ ನೀಡಿದ್ದು ಅಂಗೀಕಾರ ಸಿಕ್ಕಿದೆ. 

ರಾಜ್ಯ ಸರ್ಕಾರಗಳಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗ. ಈ ಮೂರು ಮೀಸಲಾತಿಗಳನ್ನ ಹಿಂದುಳಿದ ವರ್ಗಗಳಿಗೆ ಪ್ರವೇಶ ನೀಡುವ ಹಕ್ಕು ಇರುವುದಿಲ್ಲ. ಸಂವಿಧಾನದ 102ನೇ ತಿದ್ದುಪಡಿಯಲ್ಲೂ ಇದರ ಉಲ್ಲೇಖವಿದೆ. ಇದೀಗ ಈ ಸಂವಿಧಾನದ 102ನೇ ತಿದ್ದುಪಡಿಯ ನಿಬಂಧನೆಗಳನ್ನು ಸ್ಪಷ್ಟಪಡಿಸಲು ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. 

ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಮೂಲಕ ಮಂಡನೆಯಾಗಿದೆ. ಈ ಮಸೂದೆಯಿಂದ ಹಿಂದುಳಿದ ಜಾತಿಗಳನ್ನು ಪಟ್ಟಿ ಮಾಡುವ ಹಕ್ಕು ರಾಜ್ಯಗಳಿಗೆ ಸಿಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com