ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾದಳ ಸೈನಿಕರಿಂದ ಕಲ್ಲು ತೂರಾಟ

ದುರ್ಘಟನೆಯಲ್ಲಿ 60ಕ್ಕೂ ಹೆಚ್ಚು ಭಾರತೀಯ ಮೀನುಗಾರಿಕಾ ದೋಣಿಗಳಿಗೆ ಮಾತ್ರವಲ್ಲದೆ 25 ಬಲೆಗಳಿಗೂ ಹಾನಿ ತಗುಲಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಶ್ರೀಲಂಕಾ ನೌಕಾದಳದ ಸೈನಿಕರು ತಮಿಳುನಾಡು ಮೀನುಗಾರರ ದೋಣಿಗಳ ಮೇಲೆ ಕಲ್ಲುತೂರಾಟ ನಡೆಸಿದ್ದು, ಘಟನೆಯಲ್ಲಿ 60ಕ್ಕೂ ಹೆಚ್ಚು ದೋಣಿಗಳಿಗೆ ಹಾನಿ ಉಂಟಾಗಿರುವುದಾಗಿ ತಿಳಿದುಬಂದಿದೆ. ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ದುರ್ಘಟನೆಯಲ್ಲಿ ಭಾರತೀಯ ಮೀನುಗಾರಿಕಾ ದೋಣಿಗಳು ಮಾತ್ರವಲ್ಲದೆ 25 ಬಲೆಗಳಿಗೂ ಹಾನಿ ತಗುಲಿದೆ ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ ಮೀನುಗಾರರು ರಾಮೇಶ್ವರಂ ಬಳಿಯ ಕಚತೀವು ಎಂಬ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದರು. ಈ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.

5 ದೋಣಿಗಳಲ್ಲಿ ಆಗಮಿಸಿದ ಶ್ರೀಲಂಕಾ ನೌಕಾದಳ ಸಿಬ್ಬಂದಿ ಏಕಾಏಕಿ ತಮ್ಮ ದೋಣಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾಗಿ ಮೀನುಗಾರರು ದೂರಿದ್ದಾರೆ. ಇದುವರೆಗೂ ಯಾವುದೇ ಮೀನುಗಾರರು ಗಾಯಗೊಂಡ ಬಗ್ಗೆ ವರದಿಯಾಗಿಲ್ಲ. 

ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮೀನುಗಾರರ ಒಕ್ಕೂಟ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಈ ಬಗ್ಗೆ ಕಠಿಣ ಕ್ರಮ ಜರುಗಿಸಬೇಕಾಗಿ ಮನವಿ ಮಾಡಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com