ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದ್ದಂತೆಯೇ ಕಾಶ್ಮೀರದಲ್ಲಿ ಹಿಂಸಾಚಾರ ಉಗ್ರರ ಚಟುವಟಿಕೆ ಏರಿಕೆ!

ಅತ್ತ ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಇತ್ತ ಕಾಶ್ಮೀರದಲ್ಲಿ ಉಗ್ರರ ಹಿಂಸಾಚಾರ ಯತ್ನ, ಸಂಚು, ಚಟುವಟಿಕೆಗಳ ಪ್ರಕರಣಗಳು ಹೆಚ್ಚಾಗತೊಡಗಿವೆ.
ಕಾಶ್ಮೀರದ ಭದ್ರತಾಪಡೆಗಳು
ಕಾಶ್ಮೀರದ ಭದ್ರತಾಪಡೆಗಳು

ನವದೆಹಲಿ: ಅತ್ತ ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಇತ್ತ ಕಾಶ್ಮೀರದಲ್ಲಿ ಉಗ್ರರ ಹಿಂಸಾಚಾರ ಯತ್ನ, ಸಂಚು, ಚಟುವಟಿಕೆಗಳ ಪ್ರಕರಣಗಳು ಹೆಚ್ಚಾಗತೊಡಗಿವೆ.

ಸೋಮವಾರ ಆ.30 ರಂದು 30 ಭಯೋತ್ಪಾದಕರು ಕಾಶ್ಮೀರ ಕಣಿವೆಯೊಳಗೆ ಪೂಂಚ್ ಸೆಕ್ಟರ್ ಮೂಲಕ  ಪ್ರವೇಶಿಸಲು ಯತ್ನಿಸಿದ್ದು, ಅಫ್ಘಾನಿಸ್ತಾನ ತಾಲೀಬಾನ್ ವಶವಾದ ನಂತರ ಭದ್ರತಾ ದೃಷ್ಟಿಯಿಂದ ಆತಂಕ ಹೆಚ್ಚಾಗಿದೆ. 

ಸೇನೆಯ ಮಾಹಿತಿಯ ಪ್ರಕಾರ ಭಯೋತ್ಪಾದಕರ ಪೈಕಿ ಓರ್ವನನ್ನು ಹತ್ಯೆ ಮಾಡಲಾಗಿದ್ದು ಎಕೆ-47 ರೈಫಲ್ ನ್ನು ವಶಕ್ಕೆ ಪಡೆಯಲಾಗಿದೆ. ಇತರ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ ಆ.15 ರಂದು ಅಫ್ಘಾನಿಸ್ತಾನವನ್ನು ತಾಲೀಬಾನ್ ವಶಪಡಿಸಿಕೊಂಡ ನಂತರ ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ಏರುಗತಿಯಲ್ಲಿವೆ.

ಕೆಲವು ತಿಂಗಳುಗಳಿಂದ ನಿಷ್ಕ್ರಿಯಗೊಂಡಿದ್ದ ಜೈಶ್-ಎ-ಮೊಹಮ್ಮದ್ ನಂತಹ ಉಗ್ರ ಸಂಘಟನೆಗಳು ತಾಲೀಬಾನ್ ಅಧಿಕಾರಕ್ಕೇರುತ್ತಿದ್ದಂತೆಯೇ ಕಾಶ್ಮೀರದಲ್ಲಿ ದಿಢೀರ್ ಸಕ್ರಿಯಗೊಂಡಿವೆ. ಇದಕ್ಕೆ ಪೂರಕವೆಂಬಂತೆ ಆ.21 ರಂದು ಭದ್ರತಾ ಪಡೆಗಳು ಜೈಶ್ ಉಗ್ರನನ್ನು ಹತ್ಯೆ ಮಾಡಿದ್ದವು.

ಇದಾದ ಎರಡು ದಿನಗಳ ಬಳಿಕ ಲಷ್ಕರ್-ಎ-ತಯ್ಬಾ ಸಂಘಟನೆಯ ಸಹ ಸಂಘಟನೆಯಾದ ಟಿಆರ್ ಎಫ್ ನ ಇಬ್ಬರು ಕಮಾಂಡರ್ ಗಳನ್ನು ಶ್ರೀನಗರದಲ್ಲಿ ಎನ್ ಕೌಂಟರ್ ಮಾಡಲಾಗಿತ್ತು.

ಜೈಶ್ ಉಗ್ರ ಸಂಘಟನೆಯ ಉಗ್ರರು ಇತ್ತೀಚೆಗೆ ಕಂದಹಾರ್ ಗೆ ತೆರಳಿ ತಾಲೀಬಾನ್ ನಾಯರೊಂದಿಗೆ ಭಾರತ ಕೇಂದ್ರಿತ ಕಾರ್ಯಾಚರಣೆಗಳ ಬಗ್ಗೆ ಚರ್ಚೆ ನಡೆಸಿದ್ದರ ಹಿನ್ನೆಲೆಯಲ್ಲಿ ಈ ಘಟನೆಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.

"ನಾವು ಎಚ್ಚರದಿಂದ ಇದ್ದೇವೆ. ತಾಂತ್ರಿಕ, ಮಾನವ ಗುಪ್ತಚರ ವಿಭಾಗಗಳು ಒಳನುಸುಳುವಿಕೆಯನ್ನು ತಡೆಯಲು ಎಲ್ಒ ಸಿ ಯಾದ್ಯಂತ ಜಾಗೃತವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಇತ್ತೀಚಿನ ದಿನಗಳಲ್ಲಿ ಕಾಶ್ಮೀರದ ಕೆಲವು ಯುವಕರು ನಾಪತ್ತೆಯಾಗಿದ್ದು ಉಗ್ರ ಸಂಘಟನೆ ಸೇರಿರುವ ಆತಂತವಿದೆ ಎಂದು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com