ಉತ್ತರಾಖಂಡ: ನೈನಿತಾಲ್‌ನಲ್ಲಿ ಡೆಲ್ಟಾ ಪ್ಲಸ್ ಎವೈ 2 ಕೊರೋನಾ ವೈರಸ್‌ನ ಮೂರು ಪ್ರಕರಣ ಪತ್ತೆ

ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ಎವೈ 2 ಕೊರೋನಾ ವೈರಸ್‌ನ ಮೂರು ಪ್ರಕರಣಗಳು ಸೋಮವಾರ ದೃಢಟ್ಟಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೈನಿತಾಲ್: ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಡೆಲ್ಟಾ ಪ್ಲಸ್ ಎವೈ 2 ಕೊರೋನಾ ವೈರಸ್‌ನ ಮೂರು ಪ್ರಕರಣಗಳು ಸೋಮವಾರ ದೃಢಟ್ಟಿವೆ.

ಡೆಲ್ಟಾ ಪ್ಲಸ್ ರೂಪಾಂತರದ ದೃಢೀಕರಣಕ್ಕಾಗಿ ಜುಲೈನಲ್ಲಿ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್(NCDC)ಗೆ ಕಳುಹಿಸಲಾದ 15 ಮಾದರಿಗಳಲ್ಲಿ ಮೂರು ಡೆಲ್ಟಾ ಪ್ಲಸ್ ಉಪ-ರೂಪಾಂತರಿ ಎವೈ 2 ದೃಢಪಟ್ಟಿವೆ. ಆದರೆ, ಡೆಲ್ಟಾ ಪ್ಲಸ್ ರೂಪಾಂತರವು ಯಾವುದರಲ್ಲಿಯೂ ಕಂಡುಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಸಿಟಿವ್ ದೃಢಪಟ್ಟವರ ಮತ್ತು ಸಂಪರ್ಕಕ್ಕೆ ಬಂದ ಸೋಂಕಿತರ ಸಂಬಂಧಿಗಳ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗಿದೆ. ಆದರೆ ಎಲ್ಲರ ವರದಿಗಳು ನೆಗಟಿವ್ ಬಂದಿವೆ. ಡೆಲ್ಟಾ ಪ್ಲಸ್ ರೂಪಾಂತರವು ಯಾವುದೇ ರೋಗಿಗಳಲ್ಲಿ ದೃಢಪಟ್ಟಿಲ್ಲ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಭಾಗೀರಥಿ ಜೋಶಿ ಅವರು ಹೇಳಿದ್ದಾರೆ.

ಎವೈ 2 ರೂಪಾಂತರಿ ದೃಢಪಟ್ಟಿರುವ ಮೂವರು ರೋಗಿಗಳು ಕೋವಿಡ್ ನ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರು. ಈ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಎಲ್ಲಾ ಮೂರು ಜನರ ಮಾದರಿಗಳನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಹಲ್ದವಾನಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳ ಮಾದರಿಗಳನ್ನು ಸಹ ಎನ್‌ಸಿಡಿಸಿಗೆ ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com