ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ‘ಇ-ಕಾಣಿಕೆ’ ವ್ಯವಸ್ಥೆ; ಗೂಗಲ್ ಪೇ ಮೂಲಕ ಕಾಣಿಕೆ ಪಾವತಿಸಲು ಅವಕಾಶ
ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥೋದ್ಭವ ನಡೆಯುತ್ತಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ, ಅಪೆಕ್ಸ್ ದೇಗುಲದ ಸಂಸ್ಥೆಯು ದೇವಸ್ಥಾನದ ಸಂಕೀರ್ಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ...
Published: 01st December 2021 10:25 PM | Last Updated: 01st December 2021 10:25 PM | A+A A-

ಶಬರಿಮಲೆ
ಶಬರಿಮಲೆ: ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥೋದ್ಭವ ನಡೆಯುತ್ತಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ, ಅಪೆಕ್ಸ್ ದೇಗುಲದ ಸಂಸ್ಥೆಯು ದೇವಸ್ಥಾನದ ಸಂಕೀರ್ಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಹುಂಡಿ ಅಂದರೆ ‘ಇ-ಕಾಣಿಕೆ’ ವ್ಯವಸ್ಥೆ ಮಾಡಿದೆ.
ಹಿಂದಿನ ವರ್ಷಗಳಂತೆ, ಈ ವರ್ಷವೂ ಟಿಡಿಬಿಯ ಅಧಿಕೃತ ಬ್ಯಾಂಕರ್ ಗಳಾದ ಧನಲಕ್ಷ್ಮಿ ಬ್ಯಾಂಕ್‍ನ ಸಹಯೋಗದಲ್ಲಿ ಡಿಜಿಟಲ್ ಪಾವತಿಗೆ ವ್ಯವಸ್ಥೆಗೆ ಮುಂದಾಗಿದೆ.
ಇದನ್ನು ಓದಿ: ಆರ್ ಟಿಪಿಸಿಆರ್ ಪರೀಕ್ಷಾ ವರದಿ ಇಲ್ಲದೆಯೆ ಮಕ್ಕಳು ಶಬರಿಮಲೆ ದೇವಾಲಯಕ್ಕೆ ಹೋಗಬಹುದು
ಭಕ್ತರು ಗೂಗಲ್ ಪೇ ಮೂಲಕ ತಮ್ಮ ಕಾಣಿಕೆಯನ್ನು ಪಾವತಿ ಮಾಡಬಹುದು ಮತ್ತು ಇದಕ್ಕಾಗಿ ಕ್ಯೂಆರ್ ಕೋಡ್ ಸ್ಕ್ಯಾನರ್‍ಗಳನ್ನು ಸನ್ನಿಧಾನಂ, ದೇವಾಲಯದ ಸಂಕೀರ್ಣ ಮತ್ತು ನಿಲಕ್ಕಲ್ ತಪ್ಪಲಿನಲ್ಲಿ ಹಲವಾರು ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ.
ಒಟ್ಟು ಇದುವರೆಗೆ 22 ವಿವಿಧ ಪ್ರದೇಶಗಳಲ್ಲಿ ಕ್ಯೂಆರ್ ಕೋಡ್‍ಗಳನ್ನು ಹಾಕಲಾಗಿದೆ. ಮೀಸಲಾದ ಗೂಗಲ್ ಪೇ ಸಂಖ್ಯೆಯ ಮೂಲಕವೂ ಭಕ್ತರು ಕಾಣಿಕೆ ಮೊತ್ತವನ್ನು ಪಾವತಿಸಬಹುದು. ಶಬರಿಮಲೆ ಯಾತ್ರಾ ಮಾರ್ಗದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಕ್ಯೂಆರ್ ಕೋಡ್‍ಗಳನ್ನು ಪ್ರದರ್ಶಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಟಿಡಿಬಿ ಕಾರ್ಯನಿರ್ವಾಹಕ ಅಧಿಕಾರಿ ವಿ ಕೃಷ್ಣಕುಮಾರ್ ವಾರಿಯರ್ ಅವರು ತಿಳಿಸಿದ್ದಾರೆ.