ವಿಶ್ವದಾಖಲೆ: ಜಗತ್ತಿನಲ್ಲೇ 20 ಕೋಟಿ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬ್ ಚಾನೆಲ್ ಭಾರತದ ಟಿ-ಸಿರೀಸ್

ಸಂಗೀತ ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಟಿ-ಸಿರೀಸ್ ಸಂಸ್ಥೆ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಭಾರತದ ಅತಿ ದೊಡ್ಡ ಹಾಗೂ ಹೆಸರಾಂತ ಮ್ಯೂಸಿಕ್ ಲೇಬಲ್ ಸಂಸ್ಥೆ, ಆಡಿಯೋ ಸಂಸ್ಥೆ ಹಾಗೂ ಚಿತ್ರ ನಿರ್ಮಾಣಕ್ಕೂ ಇಳಿದಿರುವ ಟಿ-ಸಿರೀಸ್ ವಿನೂತನ ವಿಶ್ವದಾಖಲೆಗೆ ಪಾತ್ರವಾಗಿದೆ. 

20 ಕೋಟಿ ಚಂದಾದಾರರ ಗಡಿಯನ್ನು ಟಿ-ಸಿರೀಸ್ ಸಂಸ್ಥೆ ದಾಟಿದೆ. ಅ ಮೂಲಕ 20 ಕೋಟಿ ಚಂದಾದಾರರನ್ನು ಹೊಂದಿದ ಮೊದಲ ಯೂಟ್ಯೂಬ್ ಚಾನೆಲ್ ಎನ್ನುವ ಖ್ಯಾತಿಗೆ ಟಿ-ಸಿರೀಸ್ ಪಾತ್ರವಾಗಿದೆ. 

ಸಂಗೀತ ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಟಿ-ಸಿರೀಸ್ ಸಂಸ್ಥೆ ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಸಾಧನೆಯನ್ನು ಟ್ವಿಟ್ತರ್ ನಲ್ಲಿ ಹಂಚಿಕೊಂಡಿರುವ ಸಂಸ್ಥೆ, ವಿಶ್ವದ ನಂ.1 ಯೂಟ್ಯೂಬ್ ಚಾನೆಲ್ ಎಂದು ಕರೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com