ನಾಗಾಲ್ಯಾಂಡ್ ನಲ್ಲಿ ಪ್ರಜೆಗಳ ಹತ್ಯೆ: ಮೃತ ದೇಹವನ್ನು ಟಾರ್ಪಲ್ ಅಡಿ ಬಚ್ಚಿಡಲು ಯತ್ನಿಸಿದ್ದ ಸೇನೆ- ಸರ್ಕಾರ
ನಾಗಾಲ್ಯಾಂಡ್ ನಲ್ಲಿ ತಪ್ಪಾಗಿ ಗುರುತಿಸುವಿಕೆಯ ಪರಿಣಾಮ ಉಗ್ರರನ್ನು ಹತ್ಯೆ ಮಾಡುವ ಬದಲು ಪ್ರಜೆಗಳನ್ನು ಕೊಂದಿದ್ದ ಸೇನೆ ವಿಶೇಷ ಪಡೆ ಮೃತದೇಹಗಳನ್ನು ಟಾರ್ಪಾಲ್ ನ ಅಡಿಯಲ್ಲಿ ಬಚ್ಚಿಡಲು ಯತ್ನಿಸಿತ್ತು
Published: 07th December 2021 10:49 AM | Last Updated: 07th December 2021 10:49 AM | A+A A-

ಸೇನೆಯಿಂದ ಹತರಾದ ಪ್ರಜೆಗಳ ಅಂತ್ಯಕ್ರಿಯೆ
ಗುವಾಹಟಿ: ನಾಗಾಲ್ಯಾಂಡ್ ನಲ್ಲಿ ತಪ್ಪಾಗಿ ಗುರುತಿಸುವಿಕೆಯ ಪರಿಣಾಮ ಉಗ್ರರನ್ನು ಹತ್ಯೆ ಮಾಡುವ ಬದಲು ಪ್ರಜೆಗಳನ್ನು ಕೊಂದಿದ್ದ ಸೇನೆ ವಿಶೇಷ ಪಡೆ ಮೃತದೇಹಗಳನ್ನು ಟಾರ್ಪಾಲ್ ನ ಅಡಿಯಲ್ಲಿ ಬಚ್ಚಿಡಲು ಯತ್ನಿಸಿತ್ತು ಎಂಬ ಮಾಹಿತಿಯನ್ನು ರಾಜ್ಯ ಡಿಜಿಪಿ ಟಿ ಜಾನ್ ಲಾಂಗ್ಕುಮೆರ್ ಹಗೂ ಪೊಲೀಸ್ ಆಯುಕ್ತ ರೊವಿಲಾಟುವೊ ಮೊರ್ ಬಹಿರಂಗಪಡಿಸಿದ್ದಾರೆ.
ಪರ್ಯಾಯವಾಗಿ, ಪೊಲೀಸರು ದಾಖಲಿಸಿರುವ ಎಫ್ಐಆರ್ ನ ಪ್ರಕಾರ, ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಬಗ್ಗೆ ಸೇನೆ ನಮಗೆ ಮಾಹಿತಿ ನೀಡಿರಲಿಲ್ಲ. ಉದ್ದೇಶಪೂರ್ವಕವಾಗಿ ಸೇನೆ ಸಾಮಾನ್ಯ ಪ್ರಜೆಗಳ ಹತ್ಯೆ ಮಾಡಿದೆ ಎಂದು ಪೊಲೀಸ್ ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಗುರುತಿಸುವ ಪ್ರಕ್ರಿಯೆಯ ಯತ್ನವನ್ನೂ ಮಾಡದೇ ನಿಶಸ್ತ್ರ ಸಾಮಾನ್ಯ ಜನತೆಯನ್ನು ಹೊಂಚು ಹಾಕಿ ಭದ್ರತಾ ಪಡೆಗಳು ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ. 6 ಮಂದಿಯನ್ನು ಸ್ಥಳದಲ್ಲೇ ಹತ್ಯೆ ಮಾಡಲಾಗಿದ್ದು, ಸೇನೆಯ ದಾಳಿಯ ಪರಿಣಾಮ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ನಂತರ ನಡೆದಿದ್ದೆಲ್ಲವೂ ಮುಚ್ಚಿ ಹಾಕುವ ಪ್ರಯತ್ನ ಅದರ ಭಾಗವಾಗಿಯೇ ಮೃತದೇಹಗಳನ್ನು-ಬಹುಶಃ ಸೇನಾ ಕ್ಯಾಂಪ್ ಗೆ ರವಾನಿಸಲು ಟಾರ್ಪಾಲ್ ನಲ್ಲಿ ಬಚ್ಚಿಡಲಾಗಿತ್ತು ಎಂದು ಪೊಲೀಸ್ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಪಿಕ್ ಅಪ್ ಟ್ರಕ್ ನ್ನು ಹಾಗೂ ವಿಶೇಷ ಪಡೆಗಳು ಮೃತ ದೇಹಗಳನ್ನು ಬಚ್ಚಿಡುವುದಕ್ಕೆ ಯತ್ನಿಸುತ್ತಿದ್ದನ್ನು ಕಂಡಿದ್ದಾರೆ. ಈ ವೇಳೆ ಹಿಂಸಾಚಾರ ಪ್ರಾರಂಭವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.