ವಾಯು ಮಾಲಿನ್ಯ ತಡೆಗೆ 2015 ರಿಂದ ಡಿಪಿಸಿಸಿ ಖರ್ಚು ಮಾಡಿದ್ದು 478 ಕೋಟಿ ರೂಪಾಯಿ!
ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗೆ 2015 ರಿಂದಲೂ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ 478 ಕೋಟಿ ರೂಪಾಯಿ ಖರ್ಚು ಮಾಡಿರುವುದು ಆರ್ ಟಿಐ ಮೂಲಕ ಬಹಿರಂಗಗೊಂಡಿದೆ.
Published: 08th December 2021 05:23 PM | Last Updated: 08th December 2021 05:23 PM | A+A A-

(ಸಾಂಕೇತಿಕ ಚಿತ್ರ)
ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗೆ 2015 ರಿಂದಲೂ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ 478 ಕೋಟಿ ರೂಪಾಯಿ ಖರ್ಚು ಮಾಡಿರುವುದು ಆರ್ ಟಿಐ ಮೂಲಕ ಬಹಿರಂಗಗೊಂಡಿದೆ.
ಸಾಮಾಜಿಕ ಕಾರ್ಯಕರ್ತ ಅಮಿತ್ ಗುಪ್ತ ನೀಡಿರುವ ಮಾಹಿತಿಯ ಪ್ರಕಾರ ಮಾಲಿನ್ಯ ನಿಯಂತ್ರಣ ಸಂಸ್ಥೆಯಿಂದ ಮಾಲಿನ್ಯ ತಡೆಗಾಗಿ ಈ ವರೆಗೂ ಗ್ರೀನ್ ಫಂಡ್ ಅಥವಾ ಹಸಿರು ನಿಧಿಯಿಂದ 467.97 ಕೋಟಿ ರೂಪಾಯಿ ವೆಚ್ಚವನ್ನು ಮಾಡಿದೆ.
ಹಣವನ್ನು ಬ್ಯಾಟರಿ ಚಾಲಿತ ವಾಹನಗಳು, ಇ-ರಿಕ್ಷಾಗಳಿಗೆ ಸಬ್ಸಿಡಿ ನೀಡುವುದು, ಸಮ-ಬೆಸ ಸಂಖ್ಯೆಯ ವಾಹನಗಳ ಸಂಚಾರ ಯೋಜನೆ, ದೆಹಲಿ ಸಚಿವಾಲಯಗಳಲ್ಲಿ ಜೈವಿಕ ಅನಿಲ ಘಟಕ, ಆನ್‌ಲೈನ್ ವಾಯು ನಿಗಾ ಕೇಂದ್ರಗಳನ್ನು ನಿರ್ವಹಿಸುವುದು, ನೈಜ-ಸಮಯದ ಮೂಲ ಹಂಚಿಕೆಯ ಮೇಲೆ ಅಧ್ಯಯನ, ಪರಿಸರ ಮಾರ್ಷಲ್‌ಗಳ ಸಂಬಳ ಮತ್ತು ಇತರ ವಿವಿಧ ವೆಚ್ಚಗಳಿಗೆ ಹಣ ಖರ್ಚಾಗಿದೆ ಎಂದು ಆರ್ ಟಿಐ ಪ್ರಶ್ನೆಗೆ ಉತ್ತರ ನೀಡಲಾಗಿದೆ.
ಪರಿಸರ ಹಾನಿ ಪರಿಹಾರದಿಂದ 10.58 ಕೋಟಿ ರೂಪಾಯಿಗಳನ್ನು ಡಿಪಿಸಿಸಿ ಖರ್ಚು ಮಾಡಿದ್ದು. ನಿರಂತರ ವಾಯು ನಿಗಾ ಕೇಂದ್ರಗಳ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಸಂಶೋಧನೆ ಮತ್ತು ಅಧ್ಯಯನ ಯೋಜನೆಗಳು, ವಾಯು ಪ್ರಯೋಗಾಲಯಕ್ಕೆ ಉಪಕರಣಗಳ ಖರೀದಿ, ಸರ್ಕಾರಿ ಶಾಲೆಗಳಲ್ಲಿ ಮರುಬಳಕೆ ಘಟಕ ಸ್ಥಾಪನೆಗಳಿಗೆ ಈ ಹಣ ಖರ್ಚಾಗಿದೆ ಎಂದು ಆರ್ ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಲಾಗಿದ್ದು, ವಿವರವಾದ ಖರ್ಚು-ವೆಚ್ಚಗಳ ಮಾಹಿತಿಯನ್ನು ನೀಡಿಲ್ಲ.
ಏರ್ ಆಂಬಿಯೆನ್ಸ್ ಫಂಡ್ ನಿಂದ ಪ್ರತಿ ಲೀಟರ್ ಡೀಸೆಲ್ ಮಾರಾಟದಿಂದ 25 ಪೈಸೆ ಹಣ ಸಿಗಲಿದ್ದು, 2008 ರ ಮಾರ್ಚ್ ನಿಂದ 574 ಕೋಟಿ ರೂಪಾಯಿ ಸಂಗ್ರಹವಾಗಿದೆ ಇದರಿಂದ 2015 ವರೆಗೆ ಸರ್ಕಾರ ಬಳಕೆ ಮಾಡಿರುವುದು 59 ಕೋಟಿ ರೂಪಾಯಿಗಳನ್ನಷ್ಟೇ ಎಂಬ ಮಾಹಿತಿ ಬಹಿರಂಗಗೊಂಡಿದೆ.