ಸೇನಾ ಹೆಲಿಕಾಪ್ಟರ್ ದುರಂತ: 11 ಅಧಿಕಾರಿಗಳ ಮೃತದೇಹ ಗುರುತು ಪತ್ತೆ, ಇನ್ನಿಬ್ಬರ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ
ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ನಾಲ್ವರು ಭಾರತೀಯ ವಾಯುಪಡೆಯ ಸಿಬ್ಬಂದಿ ಗುರುತು ಪತ್ತೆ ಕಾರ್ಯ ಪೂರ್ಣವಾಗಿದೆ. ಇನ್ನು ಇಬ್ಬರ ಗುರುತು ಪತ್ತೆ ಕಾರ್ಯ ಆಗಬೇಕಿದ್ದು ಮೃತದೇಹಗಳ ಡಿಎನ್ ಎ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮೂಲಕ ಇದುವರೆಗೆ 11 ಮಂದಿಯ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ.
Published: 11th December 2021 09:10 AM | Last Updated: 11th December 2021 09:23 AM | A+A A-

ತಮಿಳು ನಾಡಿನ ಕೂನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ ಚಿತ್ರ
ನವದೆಹಲಿ: ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ನಾಲ್ವರು ಭಾರತೀಯ ವಾಯುಪಡೆಯ ಸಿಬ್ಬಂದಿ ಗುರುತು ಪತ್ತೆ ಕಾರ್ಯ ಪೂರ್ಣವಾಗಿದೆ. ಇನ್ನು ಇಬ್ಬರ ಗುರುತು ಪತ್ತೆ ಕಾರ್ಯ ಆಗಬೇಕಿದ್ದು ಮೃತದೇಹಗಳ ಡಿಎನ್ ಎ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮೂಲಕ ಇದುವರೆಗೆ 11 ಮಂದಿಯ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ.
ಗುರುತು ಪತ್ತೆ ಹಚ್ಚಿದ ಮೃತಪಟ್ಟ ವಾಯುಪಡೆ ಅಧಿಕಾರಿಗಳನ್ನು ಜೆಡಬ್ಲ್ಯುಒ ಪ್ರದೀಪ್ ಎ, ವಿಂಗ್ ಕಮಾಂಡರ್ ಪಿ ಎಸ್ ಚೌಹಾನ್, ಜೆಡಬ್ಲ್ಯುಒ ರಾಣಾ ಪ್ರತಾಪ್ ದಾಸ್ ಮತ್ತು ಸ್ಕ್ರ್ವಾಡ್ರ್ ಲೀಡರ್ ಕುಲದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
ತಮಿಳುನಾಡಿನ ಕೂನೂರು ಸಮೀಪ ಮೊನ್ನೆ ಬುಧವಾರ ಸೇನಾ ಹೆಲಿಕಾಪ್ಟರ್ ಪತನಗೊಂಡ ಪ್ರಕರಣದ ತನಿಖೆಯನ್ನು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ನಡೆಸಲಿದೆ. ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ: 'ಊಹಾಪೋಹ ನಿಲ್ಲಿಸಿ.. ಮೃತರ ಘನತೆ ಕಾಪಾಡಿ'- ಐಎಎಫ್
ಅಂದು ನಡೆದ ದುರಂತದಲ್ಲಿ ರಕ್ಷಣಾ ಪಡೆ ಮೊದಲ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.
#TamilNaduChopperCrash | Identification of all 4 Indian Air Force (IAF) personnel JWO Pradeep A, Wg Cdr PS Chauhan, JWO Rana Pratap Das and Sqn Leader Kuldeep Singh is complete.
— ANI (@ANI) December 11, 2021