ಉತ್ತರಾಖಂಡದಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ 1,000 ರೂ., ನಿರುದ್ಯೋಗಿ ಯುವಕರಿಗೆ 5,000 ರೂ.: ಕೇಜ್ರಿವಾಲ್ ಭರವಸೆ
ಉತ್ತರಾಖಂಡದಲ್ಲಿ 2022ರಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ವಯಸ್ಕ ಮಹಿಳೆಯರಿಗೆ ತಿಂಗಳಿಗೆ 1,000 ರೂ ಮತ್ತು ಎಲ್ಲಾ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 5,000 ರೂಪಾಯಿ ಭತ್ಯೆ ನೀಡುವುದಾಗಿ
Published: 14th December 2021 08:38 PM | Last Updated: 14th December 2021 08:38 PM | A+A A-

ಅರವಿಂದ್ ಕೇಜ್ರಿವಾಲ್
ಕಾಶಿಪುರ: ಉತ್ತರಾಖಂಡದಲ್ಲಿ 2022ರಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ವಯಸ್ಕ ಮಹಿಳೆಯರಿಗೆ ತಿಂಗಳಿಗೆ 1,000 ರೂ ಮತ್ತು ಎಲ್ಲಾ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 5,000 ರೂಪಾಯಿ ಭತ್ಯೆ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಭರವಸೆ ನೀಡಿದ್ದಾರೆ.
ಯುವಕರಿಗೆ ಉದ್ಯೋಗ ನೀಡುವ ಭರವಸೆಯನ್ನು ಪುನರುಚ್ಚರಿಸಿದ ದೆಹಲಿ ಸಿಎಂ, ಪಕ್ಷ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಕಾಶಿಪುರ್, ರಾಣಿಖೇತ್, ರೂರ್ಕಿ, ದಿದಿಹತ್, ಯಮುನೋತ್ರಿ ಮತ್ತು ಕೋಟ್‌ದ್ವಾರ್ ಅನ್ನು ಜಿಲ್ಲೆಗಳಾಗಿ ಪರಿವರ್ತಿಸುವುದಾಗಿ ಪ್ರತಿಜ್ಞೆ ಮಾಡಿದರು.
18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಮಾಸಿಕ ಭತ್ಯೆಯಾಗಿ ರೂ 1,000 ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೆ ರೂ 5,000 ಭತ್ಯೆ ನೀಡಲಾಗುವುದು ಎಂದು ಎಎಪಿ ನಾಯಕ ಹೇಳಿದ್ದಾರೆ.
ನಿರುದ್ಯೋಗ ಭತ್ಯೆಯನ್ನು ತಿಂಗಳಿಗೆ 5 ಸಾವಿರ ನೀಡಲಾಗುತ್ತದೆಯೇ ಎಂದು ಕೇಜ್ರಿವಾಲ್ ಆರಂಭದಲ್ಲಿ ಹೇಳಲಿಲ್ಲ. ಆದರೆ ನಂತರ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಭತ್ಯೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
"ಉಚಿತ ವಿದ್ಯುತ್, ಉಚಿತ ತೀರ್ಥಯಾತ್ರೆ, ಯುವಕರಿಗೆ ಉದ್ಯೋಗ ಅಥವಾ ಮಹಿಳೆಯರಿಗೆ ಮಾಸಿಕ ಭತ್ಯೆ ಸೇರಿದಂತೆ ನನ್ನ ಪ್ರತಿಯೊಂದು ಭರವಸೆಯನ್ನು ನಾವು ಈಡೇರಿಸುತ್ತೇವೆ. ನಾವು ಅವುಗಳನ್ನು ಈಡೇರಿಸದಿದ್ದರೆ ನಮ್ಮನ್ನು ಅಧಿಕಾರದಿಂದ ಕಿತ್ತುಹಾಕಿ" ಎಂದು ಕೇಜ್ರಿವಾಲ್ ಹೇಳಿದರು.