ರಾಜ್ಯಗಳ ಬಳಿ ಬಳಕೆಯಾಗದ ಸುಮಾರು 17.06 ಕೋಟಿಗೂ ಅಧಿಕ ಕೋವಿಡ್-19 ಲಸಿಕೆ ಲಭ್ಯವಿದೆ: ಕೇಂದ್ರ ಸರ್ಕಾರ
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 17.06 ಕೋಟಿಗೂ ಹೆಚ್ಚು ಸಮತೋಲಿತ ಮತ್ತು ಬಳಕೆಯಾಗದ ಕೋವಿಡ್-19 ಲಸಿಕೆ ಡೋಸ್ ಈಗಲೂ ಲಭ್ಯವಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೇಳಿದೆ.
Published: 14th December 2021 12:04 PM | Last Updated: 14th December 2021 01:32 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 17.06 ಕೋಟಿಗೂ ಹೆಚ್ಚು ಸಮತೋಲಿತ ಮತ್ತು ಬಳಕೆಯಾಗದ ಕೋವಿಡ್-19 ಲಸಿಕೆ ಡೋಸ್ ಈಗಲೂ ಲಭ್ಯವಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಗಳವಾರ ಹೇಳಿದೆ.
ಇದನ್ನೂ ಓದಿ: ಕೋವಿಡ್-19: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 5,784 ಹೊಸ ಪ್ರಕರಣಗಳು, 252 ಮಂದಿ ಸಾವು
ಈವರೆಗೂ ಕೇಂದ್ರ ಸರ್ಕಾರದಿಂದ ಉಚಿತವಾಗಿ 140.38 ಕೋಟಿ ಗೂ ಅಧಿಕ ಲಸಿಕೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ ಮತ್ತು ರಾಜ್ಯಗಳು ನೇರವಾಗಿ ಖರೀದಿಸುವ ಮೂಲಕ ಸುಮಾರು 17. 06 ಕೋಟಿ ಗೂ ಅಧಿಕ ಡೋಸ್ ಸಮತೋಲಿತ ಹಾಗೂ ಬಳಕೆಯಾಗದ ಲಸಿಕೆ ಈಗಲೂ ಕೇಂದ್ರಾಡಳಿತ ಹಾಗೂ ರಾಜ್ಯಗಳ ಬಳಿ ಲಭ್ಯವಿರುವುದಾಗಿ ತಿಳಿಸಿದೆ.
ಹೆಚ್ಚು ಲಸಿಕೆಗಳ ಲಭ್ಯತೆಯೊಂದಿಗೆ ದೇಶದಲ್ಲಿ ಲಸಿಕೆ ಅಭಿಯಾನವನ್ನು ಹೆಚ್ಚಿಸಲಾಗಿದೆ. ಇದರ ಅಂಗವಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉಚಿತ ವೆಚ್ಚದಲ್ಲಿ ಕೋವಿಡ್ ಲಸಿಕೆಯನ್ನು ಪೂರೈಸುವ ಮೂಲಕ ಬೆಂಬಲಿಸುತ್ತಿರುವುದಾಗಿ ಸಚಿವಾಲಯ ಹೇಳಿದೆ.