ಬೂಸ್ಟರ್ ಡೋಸ್ ಕುರಿತು ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ: ಪೂನಾವಾಲ

ಪ್ರತಿದಿನ 8 ಸಾವಿರದಿಂದ 10 ಸಾವಿರ ಹೊಸ ಪ್ರಕರಣಗಳೊಂದಿಗೆ ಭಾರತ ಉತ್ತಮ ಸ್ಥಾನದಲ್ಲಿದೆ. ಅದರಲ್ಲಿ ಬಹುತೇಕ ಡೆಲ್ಟಾ ರೂಪಾಂತರಿಗಳಾಗಿವೆ ಎಂದು ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲ ಮಂಗಳವಾರ ಹೇಳಿದ್ದಾರೆ.
ಆದಾರ್ ಪೂನಾವಾಲ
ಆದಾರ್ ಪೂನಾವಾಲ

ನವದೆಹಲಿ: ಪ್ರತಿದಿನ 8 ಸಾವಿರದಿಂದ 10 ಸಾವಿರ ಹೊಸ ಪ್ರಕರಣಗಳೊಂದಿಗೆ ಭಾರತ ಉತ್ತಮ ಸ್ಥಾನದಲ್ಲಿದೆ. ಅದರಲ್ಲಿ ಬಹುತೇಕ ಡೆಲ್ಟಾ ರೂಪಾಂತರಿಗಳಾಗಿವೆ ಎಂದು ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲ ಮಂಗಳವಾರ ಹೇಳಿದ್ದಾರೆ.

ಪೂರ್ಣ ಮಾಹಿತಿ ಸಿಗುವವರೆಗೂ ಊಹಿಸಲು ಬಯಸುವುದಿಲ್ಲ. ಆದರೆ, ಒಂದು ವೇಳೆ ನೀವು ಮೂರನೇ ಡೋಸ್ ತೆಗೆದುಕೊಂಡರೆ, ನಿಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಖಂಡಿತವಾಗಿಯೂ ಸುರಕ್ಷತೆ ಹೆಚ್ಚಲಾಗುತ್ತದೆ. ಕನಿಷ್ಠವೆಂದರೂ ಐದರಿಂದ ಆರು ತಿಂಗಳ ಕಾಲ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಅವರು ತಿಳಿಸಿದ್ದಾರೆ. 

ಡೆಲ್ಟಾ ರೂಪಾಂತರ ಸಂದರ್ಭದಲ್ಲಿ ಆದಂತೆ ಎಲ್ಲಾರೂ ಆಸ್ಪತ್ರೆಗೆ ಸೇರುವುದನ್ನು ಕಡಿಮೆ ಮಾಡಲು ಇದು ನೆರವಾಗಲಿದೆ . ಓಮಿಕ್ರಾನ್ ಕುರಿತು ಒಂದು ತಿಂಗಳೊಳಗೆ ಸ್ಪಷ್ಟತೆ ಸಿಗಲಿದೆ. ಆದ್ದರಿಂದ ಸದ್ಯ ಇಲ್ಲಿರುವ ಲಸಿಕೆಗಳು ಹೇಗೆ ಪರಿಣಾಮಕಾರಿ ಎಂಬುದು ಗೊತ್ತಾಗಲಿದೆ ಎಂದು ಪೂನಾವಾಲ ಹೇಳಿದ್ದಾರೆ. 

ಓಮಿಕ್ರಾನ್ ಖಂಡಿತವಾಗಿಯೂ ಹೆಚ್ಚು ಅಪಾಯಕಾರಿ. ಇದು ವೇಗವಾಗಿ ವಿಶ್ವದಾದ್ಯಂತ ಹರಡುತ್ತದೆ. ಆದರೆ, ಅದರ ತೀವ್ರ ಹೇಗಿದೆ. ಅದರಿಂದ ಎಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದನ್ನು ತಿಳಿಯಲು ಕಾಯುತ್ತಿದ್ದೇವೆ. ಅದು ಸ್ವಲ್ಪ ಸೌಮ್ಯ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಇದನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com