ಮಹಿಳಾ ಸ್ವ ಸಹಾಯ ಸಂಘಗಳ ಬ್ಯಾಂಕ್ ಖಾತೆಗಳಿಗೆ ರೂ.1,000 ಕೋಟಿ ವರ್ಗಾಯಿಸಿದ ಪ್ರಧಾನಿ ಮೋದಿ
ಮಹಿಳಾ ಸಬಲೀಕರಣ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಹಿಳಾ ಸ್ವ ಸಹಾಯ ಸಂಘಗಳ ಬ್ಯಾಂಕ್ ಖಾತೆಗಳಿಗೆ ರೂ.1,000 ಕೋಟಿ ರೂಪಾಯಿಯನ್ನು ವರ್ಗಾಯಿಸಿದ್ದಾರೆ. ಇದರಿಂದ ಸ್ವ ಸಹಾಯ ಸಂಘಗಳ ಸುಮಾರು 16 ಲಕ್ಷ ಮಹಿಳಾ ಸದಸ್ಯರಿಗೆ ಪ್ರಯೋಜನವಾಗಲಿದೆ.
Published: 21st December 2021 02:53 PM | Last Updated: 21st December 2021 02:56 PM | A+A A-

ಪ್ರಧಾನಿ ನರೇಂದ್ರ ಮೋದಿ ಮತ್ತಿತರರು
ಪ್ರಯಾಗ್ ರಾಜ್: ಮಹಿಳಾ ಸಬಲೀಕರಣ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಹಿಳಾ ಸ್ವ ಸಹಾಯ ಸಂಘಗಳ ಬ್ಯಾಂಕ್ ಖಾತೆಗಳಿಗೆ ರೂ.1,000 ಕೋಟಿ ರೂಪಾಯಿಯನ್ನು ವರ್ಗಾಯಿಸಿದ್ದಾರೆ. ಇದರಿಂದ ಸ್ವ ಸಹಾಯ ಸಂಘಗಳ ಸುಮಾರು 16 ಲಕ್ಷ ಮಹಿಳಾ ಸದಸ್ಯರಿಗೆ ಪ್ರಯೋಜನವಾಗಲಿದೆ.
ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಈ ಹಣವನ್ನು ವರ್ಗಾಯಿಸಲಾಗಿದೆ.
ಪ್ರತಿ ಸ್ವಹಾಯ ಸಂಘಗಳಿಗೆ ರೂ. 1.10 ಲಕ್ಷದಂತೆ 80 ಸಾವಿರ ಸ್ವ ಸಹಾಯ ಸಂಘಗಳು ಸಮುದಾಯ ಹೂಡಿಕೆ ನಿಧಿಯನ್ನು ಪಡೆದಿದ್ದರೆ, ರೂ.15 ಸಾವಿರದಂತೆ 60 ಸ್ವ ಸಹಾಯ ಸಂಘಗಳು ಆವರ್ತ ನಿಧಿಯನ್ನು ಸ್ವೀಕರಿಸಿವೆ.
ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ಒದಗಿಸುವ ಮುಖ್ಯಮಂತ್ರಿ ಕನ್ಯಾ ಸುಮಂಗಳಾ ಯೋಜನೆಯ 1 ಲಕ್ಷ ಫಲಾನುಭವಿಗಳಿಗೆ ಹಣವನ್ನು ಪ್ರಧಾನಿ ವರ್ಗಾಯಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Prayagraj: PM transfers Rs 1000 cr in bank accounts of various SHGs, also transfers money to over 1 lakh beneficiaries of Mukhya Mantri Kanya Sumangala Scheme,which provides assistance to girl child. He also laid foundation stone of 202 Supplementary Nutrition Manufacturing Units pic.twitter.com/4r7USB7yjU
— ANI UP/Uttarakhand (@ANINewsUP) December 21, 2021