ಭಾರತ ಸರ್ಕಾರ ಜನರಿಗೆ ಬೂಸ್ಟರ್ ಡೋಸ್ ಯಾವಾಗ ಕೊಡುತ್ತೆ?: ರಾಹುಲ್ ಗಾಂಧಿ ಪ್ರಶ್ನೆ

ಕೊರೋನಾ ವೈರಸ್ ಮೂರನೇ ಅಲೆ ತಡೆಗ್ಟುವ ಹಿನ್ನಲೆಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಶೇ.60 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಬೇಕಿತ್ತು, ಆದರೆ ಕೇವಲ ಶೇ. 42 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ:  ಕೊರೋನಾ ವೈರಸ್ ಮೂರನೇ ಅಲೆ ತಡೆಗಟ್ಟುವ ಹಿನ್ನಲೆಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಶೇ.60 ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡಬೇಕಿತ್ತು, ಆದರೆ ಕೇವಲ ಶೇ. 42 ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸರ್ಕಾರ ದೇಶದ ಜನರಿಗೆ ಲಸಿಕೆ ನೀಡಿರುವ ಬಗ್ಗೆ ಅಂಕಿ ಅಂಶ ಹಂಚಿಕೊಂಡಿರುವ ರಾಹುಲ್ ಗಾಂಧಿ ಬೂಸ್ಟರ್ ಡೋಸ್ ಯಾವಾಗ ನೀಡಲಿದ್ದೀರಿ ಎಂದು ಪ್ರಶ್ನಿಸಿದೆ.  

ಪ್ರತಿದಿನ 55.3 ಮಿಲಿಯನ್ ಡೋಸ್ ಲಸಿಕೆ ಕೊರತೆಯಿದೆ. ದೇಶದ ಬಹಸಂಖ್ಯಾತ ಜನರಿಗೆ ಇನ್ನೂ ಲಸಿಕೆ ನೀಡಿಲ್ಲ,  ಹೀಗಿರುವಾಗ ಭಾರತ ಸರ್ಕಾರ ಬೂಸ್ಟರ್ ಡೋಸ್ ಯಾವಾಗ ನೀಡಲಿದೆ ಎಂದು ಪ್ರಶ್ನಿಸಿದೆ.

ಮೂರನೇ ಅಲೆ ವಿರುದ್ಧ ಹೋರಾಡಲು  ಡಿಸೆಂಬರ್ 2021ರ ವೇಳೆಗೆ ದೇಶದ ಶೇ.  60 ರಷ್ಚು ಜನರಿಗೆ ಲಸಿಕೆ ನೀಡಬೇಕಿತ್ತು,  ಆದರೆ ಆಗಲಿಲ್ಲ, ಪ್ರತಿದಿನ ಲಸಿಕೆ ಕೊರತೆ ಎದುರಾಗುತ್ತಿದೆ ಎಂದು ದೂರಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ ಲಸಿಕೆ ನೀಡುವ ವೇಗವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com