ದೇಶದ ಶೇ. 60 ರಷ್ಟು ವಯಸ್ಕರು ಸಂಪೂರ್ಣ ಎರಡು ಡೋಸ್ ಲಸಿಕೆ ಪಡೆದಿದ್ದಾರೆ: ಕೇಂದ್ರ
ಭಾರತದಲ್ಲಿ ಅರ್ಹ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರು ಸಂಪೂರ್ಣ ಎರಡೂ ಡೋಸ್ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ಹೇಳಿದ್ದಾರೆ.
Published: 23rd December 2021 11:57 AM | Last Updated: 23rd December 2021 12:02 PM | A+A A-

ಲಸಿಕೆ ಪಡೆಯುತ್ತಿರುವ ಆರೋಗ್ಯ ಕಾರ್ಯಕರ್ತ
ನವದೆಹಲಿ: ಭಾರತದಲ್ಲಿ ಅರ್ಹ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರು ಸಂಪೂರ್ಣ ಎರಡೂ ಡೋಸ್ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ಹೇಳಿದ್ದಾರೆ.
"ಹೊಸ ಸಾಧನೆಗಳನ್ನು ಮಾಡುತ್ತಿರುವ ಭಾರತಕ್ಕೆ ಅಭಿನಂದನೆಗಳು. ಸಾರ್ವಜನಿಕ ಭಾಗವಹಿಸುವಿಕೆ ಮತ್ತು ನಮ್ಮ ಆರೋಗ್ಯ ಕಾರ್ಯಕರ್ತರ ಸಮರ್ಪಿತ ಪ್ರಯತ್ನಗಳ ನೆರವಿನಿಂದ, ದೇಶದ ಶೇ. 60 ಕ್ಕಿಂತ ಹೆಚ್ಚು ವಯಸ್ಕರು ಈಗ ಸಂಪೂರ್ಣವಾಗಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ" ಎಂದು ಮಾಂಡವಿಯಾ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ದೇಶದಲ್ಲಿ ಓಮಿಕ್ರಾನ್ ಕೇಸು 236ಕ್ಕೆ ಏರಿಕೆ: 7,495 ಹೊಸ ಕೋವಿಡ್ ಪ್ರಕರಣ, 434 ಮಂದಿ ಸಾವು
ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಭಾರತದ ವಯಸ್ಕರಲ್ಲಿ ಸುಮಾರು ಶೇ 89 ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ 70,17,671 ಡೋಸ್ ಲಸಿಕೆ ನೀಡುವುದರೊಂದಿಗೆ ದೇಶದಲ್ಲಿ COVID-19 ಲಸಿಕೆ ಪಡೆದ ಡೋಸ್‌ಗಳ ಸಂಖ್ಯೆ 139.70 ಕೋಟಿ ದಾಟಿದೆ.
Accomplishing more new feats!
— Dr Mansukh Mandaviya (@mansukhmandviya) December 23, 2021
Congratulations India
Aided by public participation & dedicated efforts of our health workers, over 60% of the eligible population fully vaccinated now #SabkoVaccineMuftVaccine pic.twitter.com/cts7lR8SzA