ಸಾಂದರ್ಭಿಕ ಚಿತ್ರ
ದೇಶ
ರಾಜಸ್ಥಾನದಲ್ಲಿ 21 ಹೊಸ ಓಮಿಕ್ರಾನ್ ಪ್ರಕರಣ ದೃಢ: 43ಕ್ಕೆ ಏರಿಕೆ
ರಾಜಸ್ಥಾನದಲ್ಲಿ ಹೊಸದಾಗಿ 21 ಓಮಿಕ್ರಾನ್ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಜೈಪುರ: ರಾಜಸ್ಥಾನದಲ್ಲಿ ಹೊಸದಾಗಿ 21 ಓಮಿಕ್ರಾನ್ ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಪುಣೆಯ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಮಾದರಿಯ ಪರೀಕ್ಷೆ ನಡೆಸಿದಾಗ 21 ಮಂದಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 11 ಮಂದಿ ಜೈಪುರ, ಆರು ಮಂದಿ ಅಜ್ಮೀರ್ ಮತ್ತು ಮೂವರು ಉದಯಪುರ, ಒಬ್ಬರು ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ವಕ್ತಾರರು ಹೇಳಿದ್ದಾರೆ.
ಈ ಸೋಂಕಿತರಲ್ಲಿ ಐವರು ವಿದೇಶದಿಂದ ಮರಳಿದವರಾಗಿದ್ದಾರೆ, ಮೂವರು ವಿದೇಶಿ ಪ್ರಯಾಣಿಕರೊಂದಿಗೆ ಸಂಪರ್ಕಕ್ಕೆ ಹೊಂದಿದವರಾಗಿದ್ದಾರೆ. ರಾಜಸ್ಥಾನದಲ್ಲಿ ಸಕ್ರಿಯವಾಗಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆ 244 ಆಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ