'ಬಿಜೆಪಿ ಮತ್ತು ಭಾರತವನ್ನು ಬಲಿಷ್ಠಗೊಳಿಸಲು ಸಹಾಯ ಮಾಡಿ': ಪಕ್ಷದ ನಿಧಿಗೆ ಪ್ರಧಾನಿ ಮೋದಿ 1000 ರೂ. ದೇಣಿಗೆ!

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಬಿಜೆಪಿ ಸೂಕ್ಷ್ಮ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದೆ. 
ಮೋದಿ
ಮೋದಿ

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಬಿಜೆಪಿ ಸೂಕ್ಷ್ಮ ದೇಣಿಗೆ ಅಭಿಯಾನವನ್ನು ಪ್ರಾರಂಭಿಸಿದೆ. 

ಈ ಅಭಿಯಾನವು ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯ ತನಕ(ಫೆಬ್ರವರಿ 11 ರವರೆಗೆ) ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಜನರು ಐದು ರೂಪಾಯಿಯಿಂದ 1000 ಸಾವಿರ ರೂಪಾಯಿವರೆಗೆ ದೇಣಿಗೆ ನೀಡಲು ಅವಕಾಶವಿದೆ. NaMo ಆಪ್ ಮೂಲಕ ಯಾವುದೇ ವ್ಯಕ್ತಿ ಈ ದೇಣಿಗೆಯನ್ನು ನೀಡಬಹುದು. ಹೆಚ್ಚು ದೇಣಿಗೆ ಸಂಗ್ರಹಿಸುವ ಕಾರ್ಮಿಕರ ಕೊಡುಗೆಯನ್ನು ಸಹ ಪ್ರಶಂಸಿಸಲಾಗುತ್ತದೆ. ಇದರೊಂದಿಗೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗರಿಷ್ಠ ದೇಣಿಗೆ ಸಂಗ್ರಹಿಸುವವರನ್ನೂ ಗುರುತಿಸಲಾಗುವುದು.

ಬಿಜೆಪಿ ಪಕ್ಷದ ನಿಧಿಗೆ 1000 ರೂ. ದೇಣಿಗೆ ನೀಡಿದ ಪ್ರಧಾನಿ ಮೋದಿ, ಭಾರತೀಯ ಜನತಾ ಪಕ್ಷದ ಬೆಂಬಲಿಗರು ಮೈಕ್ರೊಡೊನೇಷನ್ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಪಕ್ಷಕ್ಕೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. 

ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ. ಇದರೊಂದಿಗೆ ತನ್ನ ಅಕೌಂಟ್ ನಂಬರ್, ಮೇಲ್ ಐಡಿ, ಪ್ಯಾನ್ ನಂಬರ್ ಮತ್ತು ಮೇಲ್ ಐಡಿಯನ್ನು ಬ್ಲರ್ ಮಾಡಿ ಹೈಡ್ ಮಾಡಿರುವ ರಸೀದಿಯನ್ನೂ ಹಂಚಿಕೊಂಡಿದ್ದಾರೆ. ಬಿಜೆಪಿಯನ್ನು ಬಲಿಷ್ಠಗೊಳಿಸಲು ಸಹಕರಿಸಿ ಎಂದು ಬರೆದುಕೊಂಡಿದ್ದಾರೆ. ಭಾರತವನ್ನು ಬಲಿಷ್ಠಗೊಳಿಸಲು ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.

ದೇಣಿಗೆಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ನಿಧಿಗೆ ₹1,000 ದೇಣಿಗೆ ನೀಡಿದರು. ನಡ್ಡಾ ಅವರು NaMo ಅಪ್ಲಿಕೇಶನ್‌ನ 'ದೇಣಿಗೆ' ಮಾಡ್ಯೂಲ್ ಅನ್ನು ಬಳಸಿಕೊಂಡು ದೇಣಿಗೆ ನೀಡಿದ್ದಾರೆ. ಇದರೊಂದಿಗೆ ಈ ಅಭಿಯಾನಕ್ಕೆ ಜನರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com